ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಿಳೆಯರು ಉದ್ಯೋಗದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ:ಸಹಾಯಕ ಪ್ರಾಧ್ಯಾಪಕ ನಾಗರತ್ನ ತಮ್ಮಿನಾಳ

ಕೊಪ್ಪಳ :ಮಹಿಳೆಯರು ಉದ್ಯೋಗದ ಜೊತೆಗೆ ಕೌಶಲ್ಯಗಳನ್ನು ಕಲಿಯಿರಿ ಎಂದು ಇತಿಹಾಸ ವಿಭಾಗದ ಸಹಾಯಕ ಪ್ರಾದ್ಯಾಪಕ ನಾಗರತ್ನ ತಮ್ಮಿನಾಳ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ಕೊಪ್ಪಳದ ಜಿಲ್ಲಾ ಉದ್ಯೋಗ ಮಿನಿಮಯ ಕೇಂದ್ರ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಉದ್ಯೋಗ ಕೋಶ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಮಹಿಳೆಯರು ದುಡಿಯುವುದರಿಂದ ದೇಶದ ಜಿಡಿಪಿಯಲ್ಲಿ ಮಹಿಳೆಯರ ಪಾಲು ಹೆಚ್ಚಾಗಿದೆ. ಮನೆ ಕೆಲಸ ಮತ್ತು ಉದ್ಯೋಗ ಮಾಡುವ ಜವಾಬ್ದಾರಿ ಹೆಣ್ಣಿನ ಮೇಲಿದೆ. ಎಲ್ಲರಿಗೂ ಸರಕಾರಿ ಉದ್ಯೋಗ ಸಿಗದೇ ಇದ್ದರೇ ಸ್ವಯಂ ಉದ್ಯೋಗಗಳನ್ನು ಮಾಡಿ.
ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ವಾಗಬೇಕು. ಮಹಿಳೆಯರು ಉದ್ಯೋಗ ಮಾಡುವುದರಿಂದ ಸಮಾನತೆ ಬರುತ್ತದೆ. ಹೆಣ್ಣು ಮಕ್ಕಳು ಒಂದೇ ಸಮಯದಲ್ಲಿ ಹಲವಾರು ಕೆಲಸಗಳನ್ನು ಮಾಡುತ್ತಾರೆ. ಮಹಿಳೆಯರು ಉದ್ಯೋಗದ ಕೌಶಲ್ಯಗಳನ್ನು ಕಲಿಯಬೇಕು. ಮಹಿಳೆಯರು ಸ್ವಯಂ ಉದ್ಯೋಗ ಮಾಡಿ ಮಹಿಳೆ ಅಬಲೆಯಲ್ಲ ಅವಳು ಸಬಲೆ. ಮೊದಲು ಚೆನ್ನಾಗಿ ಓದಿ ಆಗ ಮಾತ್ರ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿರುವ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡಿ ನೀವು ಕಾಲೇಜಿನಲ್ಲಿ ಕೇವಲ ಶಿಕ್ಷಣ ಮಾತ್ರ ಪಡೆಯುವುದಲ್ಲ ಅದರ ಜೊತೆಗೆ ಉದ್ಯೋಗಗಳನ್ನು ಪಡೆಯಬೇಕು.
ನೀವು ನಿಮ್ಮ ಬದಕನ್ನು ಕಟ್ಟಿಕೊಳ್ಳಬೇಕು ಸಂದರ್ಶನ ಕೌಶಲ್ಯಗಳನ್ನು ಕಲಿಯಿರಿ ನೀವು ಸಮಗ್ರವಾಗಿ ಅಧ್ಯಯನ ಮಾಡಿ ಆಗ ಮಾತ್ರ ನೀವು ಸರಕಾರಿ ಉದ್ಯೋಗ ಪಡೆಯುವುದಕ್ಕೆ ಸಾಧ್ಯ ಜ್ಞಾನದ ಸಂಪತ್ತು ಸಿಕ್ಕಾಗ ನಿಮ್ಮ ಜೀವನ ಸುಖವಾಗಿರುತ್ತದೆ ಇಂದು ಸ್ಪರ್ಧೆತ್ಮಕ ಯುಗ ಶಿಕ್ಷಣ ನಮ್ಮ ಬದಕನ್ನು ಬದಲಾಯಿಸುತ್ತದೆ ಉದ್ಯೋಗ ಮೇಳಗಳನ್ನು ಉಪಯೋಗಿಸಿಕೊಳ್ಳಬೇಕು ನೀವು ಕ್ರಿಯಾಶೀಲರಾಗಿರಬೇಕು ನಿರಂತರ ಅಧ್ಯಯನ ಮಾಡಬೇಕು ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳಿ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿರುವ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹುಲಿಗೆಮ್ಮ ಅವರು ಮಾತನಾಡುತ್ತಾ ಸಂವಿಧಾನದಲ್ಲಿ ಮಹಿಳೆಯರಿಗೆ ಒಳ್ಳೆಯ ಅವಕಾಶಗಳನ್ನು ಕೊಟ್ಟಿದೆ ಮಹಿಳೆಯರು ಉದ್ಯೋಗ ಜೊತೆಗೆ ಕೌಶಲ್ಯ ಗಳನ್ನು ಕಲಿಯಬೇಕು. ಎಲ್ಲಾ ಅವಕಾಶಗಳನ್ನು ಪಡೆದುಕೊಳ್ಳಬೇಕು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳಬೇಕು ಉದ್ಯೋಗ ಎಲ್ಲೇ ಸಿಕ್ಕಿದರೂ ಕೂಡಾ ಹೋಗಿ ಸಮೀಪ ಹತ್ತಿರ ಅಂತ ವಿಚಾರ ಮಾಡಬೇಡಿ.ಆತ್ಮ ವಿಶ್ವಾಸದಿಂದ ಸಂದರ್ಶನಗಳನ್ನು ಎದುರಿಸಿ ಎಂದರು.
ಕೊಪ್ಪಳದ ಉದ್ಯೋಗ ಅಭಿವೃದ್ಧಿ ಕಾರ್ಯನಿರ್ವಾಹಕ ಅಧಿಕಾರಿ ಹನುಮೇಶ್ ತೊಂಡಿಹಾಳ ಅವರು ಮಾತನಾಡುತ್ತಾ ಮೊದಲು ಉದ್ಯೋಗ ವಿನಿಮಯ ಕೇಂದ್ರ ರಾಯಚೂರು ಜಿಲ್ಲೆಯಲ್ಲಿತ್ತು ಇಂದು ಕೊಪ್ಪಳ ಜಿಲ್ಲೆಯಲ್ಲಿದೆ ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಾನವ ಸಂಪನ್ಮೂಲ ಅಧಿಕಾರಿ ಪ್ರಭು ಮಾತನಾಡುತ್ತ ಮಾತನಾಡುತ್ತಾ ಈ ಉದ್ಯೋಗ ಮೇಳ ಕೇವಲ ಮಹಿಳೆಯರಿಗೆ ಮಾತ್ರ ಇದನ್ನು ಯಾಕೆ ಇಟ್ಟಿದ್ದೇವೆ ಅಂದ್ರೆ ಪುರುಷ ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಶಿವಯೋಗಿ ಮಾತನಾಡಿದರು.
ವೇದಿಕೆಯಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕ ಡಾ.ಅಶೋಕ ಕುಮಾರ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಶಿವಕುಮಾರ್, ಕಾಲೇಜಿನ ಉಪನ್ಯಾಸಕ ಡಾ. ನರಸಿಂಹ, ವಿವಿಧ ಉದ್ಯೋಗ ಆಕಾಂಕ್ಷಿಗಳು ಮತ್ತು ವಿದ್ಯಾರ್ಥಿನಿಯರು ಇದ್ದರು.
ಕಾರ್ಯಕ್ರಮವನ್ನು ಡಾ. ಅಶೋಕ ಕುಮಾರ್ ನಿರೂಪಿಸಿ, ಸ್ವಾಗತಿಸಿದರು.ಸರಸ್ವತಿ ಪ್ರಾರ್ಥನೆ ಗೀತೆ ಹಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ