ಕೊಪ್ಪಳ:ಮಹಾವಿದ್ಯಾಲಯಗಳು ಇರುವುದೇ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವುದಕ್ಕೆ ಎಂದು ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮತ್ತು ವಿಜ್ಞಾನ ವಿಭಾಗದ ಸಂಚಾಲಕರಾದ ವಿಠೋಬ ಅವರು ಹೇಳಿದರು.ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧುವಾರದಂದು ವಿಜ್ಞಾನ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ಸೈನ್ಸ್ ಫೆಸ್ಟ್ -2024 ನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನೀವು ಇಂದು ವಿಜ್ಞಾನ ಕಲಿಯುವಾಗ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೀರಿ.
ವಿಜ್ಞಾನ ವಿಭಾಗಗಳಿಗೆ ಇಂದು ಸರಕಾರವು ಬಹಳ ಅನುದಾನ ಕೊಡುತ್ತದೆ. ಹೊಸ ಕಟ್ಟಡಗಳು, ಹೊಸ ಪ್ರಯೋಗಲಯಗಳು ಸ್ಥಾಪನೆ ಆಗುತ್ತಿವೆ ಎಂದರು.
ಮುಖ್ಯ ಅತಿಥಿಯಾಗಿರುವ ಕನ್ನಡ ವಿಭಾಗದ ಮುಖ್ಯಸ್ಥ ರಾದ ಡಾ. ಹುಲಿಗೆಮ್ಮ ಅವರು ಮಾತನಾಡುತ್ತ ನೀವು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು. ನಮ್ಮನ್ನೇ ನಾವು ನಿರ್ಲಕ್ಷ ಮಾಡಿಕೊಳ್ಳಬಾರದು ಎಲ್ಲರೂ ಅವಕಾಶಗಳನ್ನು ಕಳೆದುಕೊಳ್ಳಬಾರದು ಎಂದರು.
ಅಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಚಾರ್ಯರಾದ ಡಾ.ಗಣಪತಿ ಲಮಾಣಿಯವರು ಮಾತನಾಡುತ್ತ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತವೆ. ಉನ್ನತ ಶಿಕ್ಷಣ ಪಡೆಯಬೇಕು. ಕಠಿಣ ಪರಿಶ್ರಮ ಪಡೆಯಬೇಕು. ಆಗ ಮಾತ್ರ ಜೀವನದಲ್ಲಿ ಉನ್ನತ ಸ್ಥಾನ ಪಡೆಯಬಹುದು ಎಂದರು.
ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಮಂಜುಳಾ, ಆಶಾ, ಪಲ್ಲವಿ, ಯಶೋದಾ, ಬಸವರಾಜ, ಸುಷ್ಮಾ, ವಿದ್ಯಾವತಿ, ಇದ್ದರು.
ಆರ್ಶಿಯ ಮತ್ತು ತಾಸ್ಮಿಯಾ, ನಿರೂಪಿಸಿದರು. ದ್ಯಾವಮ್ಮ ಸ್ವಾಗತಿಸಿದರು. ಜ್ಯೋತಿ ಮತ್ತು ಅಸ್ಮಿಯ ಪ್ರಾರ್ಥನೆ ಗೀತೆ ಹಾಡಿದರು.ಪ್ರಿಯ ವಂದಿಸಿದರು.