ಕೊಪ್ಪಳ: ತಾಲೂಕಿನ ಗಬ್ಬೂರು ಗ್ರಾಮದ ಅಂಗನವಾಡಿ ಶಾಲೆಯಲ್ಲಿ ಮಕ್ಕಳೊಂದಿಗೆ ಸದವರಿಂದ 78ನೆಯ ಸ್ವತಂತ್ರೋತ್ಸವವನ್ನು ಬಹಳ ಸಂಭ್ರಮದಿಂದ ಆಚರಣೆ ಮಾಡಿದರು ನಂತರ ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ಪಾರ್ವತಿ ಮಾತನಾಡಿ ಭಾರತವು ಪ್ರತಿ ವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಭಾರತೀಯರು ಸ್ವತಂತ್ರರಾಗುವವರೆಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ದೇಶಭಕ್ತರ ನಿಸ್ವಾರ್ಥ ತ್ಯಾಗದ ಗೌರವಾರ್ಥವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಮೊದಲ ಬಾರಿಗೆ 15 ಆಗಸ್ಟ್ 1947 ರಂದು ಆಚರಿಸಲಾಯಿತು ಎಂದರು, ಗ್ರಾಮದ ಎಲ್ಲಾ ಪೋಷಕರು ಮಕ್ಕಳಿಗೆ “ಭಾರತದ ಪ್ರಜಾಪ್ರಭುತ್ವದ” ಮತ್ತು ದೇಶ ಭಕ್ತಿ, ಮನೆಯಲ್ಲಿ ಶಿಕ್ಷಣದ ಕಲಿಕೆಯ ಜೊತೆಗೆ ಹರಿವನ್ನು ಮೂಡಿಸುವ ಮೂಲಕ ಶಿಕ್ಷಣ ಕಲಿಕೆ ಮೂಡಿಸಬೇಕು. ದೇಶಭಕ್ತಿ ಮತ್ತು ಪ್ರಜಾಪ್ರಭುತ್ವದ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿ ಮಕ್ಕಳಲ್ಲಿ ಹೆಚ್ಚು ಬೆಳೆಯುತ್ತದೆ, ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಯುತ ಕರಿಯಪ್ಪ ಕಂಬಳಿ, ಲಕ್ಷ್ಮಣ ದೊಡ್ಡಮನಿ, ಅಣ್ಣಪ್ಪ ಪೂಜಾರ್, ದೇವಪ್ಪ ಕುರಿ, ಶಾಲೆ ಮುಖ್ಯೋಪಾಧ್ಯರಾದ ಅಶೋಕ್, ಎಸ್ ಡಿ ಎಂ ಸಿ ಸದಸ್ಯರು, ಅಂಗನವಾಡಿ ಶಿಕ್ಷಕಿಯರು,ಆಶಾ ಕಾರ್ಯಕರ್ತೆಯರು, ಶಾಲೆ ಸಹಾಯಕಿಯರು, ಗ್ರಾಮದ ಗುರು ಹಿರಿಯರು ಯುವಕರು ಭಾಗಿಯಾಗಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.