ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಶರಣ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 4,5 ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಈ ವೇಳೆಯಲ್ಲಿ ಗ್ರಾಮದ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ಅವರ ಬೌದ್ದಿಕ ವಿಚಾರಗಳನ್ನು ನಮ್ಮ ಸರಕಾರಿ ಶಾಲಾ ಮಕ್ಕಳಿಗೂ ಸಿಗಲಿ ಎಂದು ಒಂದು ಚಿಕ್ಕ ಪ್ರಯತ್ನ ಜ್ಞಾನ ಮಿತ್ರ ಟ್ಯೂಷನ್ ಕ್ಲಾಸ್ ಮಾಡುತ್ತಿದೆ ಇದಕ್ಕೆ ಇದರಲ್ಲಿ ಪ್ರತಿ ಭಾನುವಾರ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಕ್ ಇಂಗ್ಲೀಷ್ ಹಾಗೂ ಪಾಠದ ಅಧ್ಯಾಯಗಳು ಶುರುಮಾಡಿದೆ ಈ ಅಧ್ಯಾಯಗಳನ್ನು ಹಾಗೂ ಇಂಗ್ಲೀಷ್ ಕಲಿಕೆಯನ್ನು ಡಣಾಪುರ ಗ್ರಾಮದ JSWದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಲಿಂಗರಾಜ ತಂದೆ ಬಿ ವಿರುಪಣ್ಣ ಅವರು ಮಕ್ಕಳಿಗೆ ಉತ್ತಮ ಭೊದನೆ ಮಾಡುತ್ತಿದ್ದಾರೆ ಇನ್ನು ಎರಡನೇ ತರಗತಿ ಹಾಗೂ ಅದೇ ರೀತಿ ನಾಲ್ಕು ಮತ್ತು ಐದನೇ ತರಗತಿಯ ಮಕ್ಕಳಿಗಾಗಿ ಮುಂಬರುವ ನವೋದಯ ,ಮುರಾರ್ಜಿ ,ಸೈನಿಕ ಇನ್ನಿತರ ಸ್ಪರ್ದಾತ್ಮಕ ಪರಿಕ್ಷೆಗೆ ತೈಯಾರಿಯಾಗಲು ಮಕ್ಕಳಿಗೆ ಸುಮಂಗಲ ಸಿಂಪಿಗಿ ಶ್ರೀರಾಮ ನಗರ ಹಸಿರು ಬಳಗ ಇವರು ಸ್ಪರ್ಧಾತ್ಮಕ ಪರಿಕ್ಷೆಗೆ ಸಂಬಂದಿಸಿದ ವಿಷಯಗಳನ್ನು ಕಾರ್ಯಗಾರದಲ್ಲಿ ನೆರೆವೇರಿಸಿಕೊಟ್ಟರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಗ್ರಾಮೀಣ ಭಾಗದ ಮಕ್ಕಳಲ್ಲಿ ಶಿಕ್ಷಣ ಅಭಿವೃದ್ದಿಯಾಗಬೇಕೆಂದು ಗ್ರಾಮದ ಯುವಕರು ಪಣತೊಟ್ಟಿದ್ದಾರೆಂದು ತಂಡದ ಸದಸ್ಯರು ತಿಳಿಸಿದರು.
ಈ ವೇಳೆ ಗ್ರಾಮದ ಕಾರ್ಯಗಾರ ನೆರೆವೇರಿಸಿಕೊಟ್ಟ ಶಿಕ್ಷಕರಾದ ಬಿ ಲಿಂಗರಾಜ ,ಸುಮಂಗಲ ಸಿಂಪಿ , ರಾಘವೇಂದ್ರ ,ಹನುಮೇಶ ಬಿ ,ಬಸವರಾಜ ,ಲಿಂಗರಾಜ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗಿ ಇದ್ದರು.