ಕೊಪ್ಪಳ/ಕಾರಟಗಿ :ಕೋಲಾರದ ಯುವ ನಟ ಸಂದೇಶ ನಟಿಸಿರುವ “ದರೂಲರ್ಸ್” ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದ ಪದ್ಮಾವತಿ ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನಗೊಳ್ಳುತ್ತಿದೆ.
ಬಡ ದಲಿತ ಹೆಣ್ಣಿಗಾದ ಮೋಸ, ಜಾತಿಯ ಶೋಷಣೆಯನ್ನು ಎಳೆ ಎಳೆಯಾಗಿ ಬಿಚ್ಚಿ ತೋರಿಸಿದ್ದು, ಡಾ.ಬಿಆರ್ ಅಂಬೇಡ್ಕರ್ ಅವರ ಸಂವಿಧಾನ ಹಾಗೂ ಕಾನೂನು ಮಾರ್ಗಗಳಿಂದ ಶೋಷಿತ ಹೆಣ್ಣು ಜಯವನ್ನು ಸಾಧಿಸಬಲ್ಲಳು ಎನ್ನುವ ಪ್ರಮುಖ ಅಂಶವನ್ನು ಇಟ್ಟುಕೊಂಡು ಚಿತ್ರಿಸಲಾಗಿದ್ದು, ಸಮಾಜದಲ್ಲಿ ಸಮಾನತೆ, ಪೋಲಿಸ್ ಅಧಿಕಾರಿಗಳ ದಕ್ಷತೆಯ ಕುರಿತು ತೋರಿಸಲಾಗಿದೆ. ಪ್ರತಿಯೊಬ್ಬರೂ ನೋಡಲೇಬೇಕಾದ ನೈಜ ಚಿತ್ರವಾಗಿದ್ದು ಪಟ್ಟಣದ ಜನ ಮನ ಗೆಲ್ಲುತ್ತಿರುವ ಚಿತ್ರವಾಗಿ ಯಶಸ್ಸಿನತ್ತ ಸಾಗುತ್ತಿದೆ.
ಈ ಸಮಯದಲ್ಲಿ ಚಿತ್ರ ವೀಕ್ಷಣೆ ಮಾಡಿದ ದಲಿತ ವಿಮೋಚನ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಮದಗ್ನಿ ಚೌಡ್ಕಿ ಮಾತನಾಡಿ, ನಿಜಕ್ಕೂ ಈ ಚಿತ್ರವು ಅದ್ಭುತವಾಗಿದೆ. ಒಂದು ಜಾತಿ ಮತ್ತು ಧರ್ಮಕ್ಕೆ ಸೀಮತವಾದ ಚಿತ್ರವಲ್ಲ. ಪ್ರತಿಯೊಬ್ಬರೂ ಬಂದು ನೋಡಲೇಬೇಕಾದ ಚಿತ್ರವಾಗಿದ್ದು, ಅದರಲ್ಲೂ ಪ್ರಮುಖವಾಗಿ ಕಾಲೇಜು ವಿದ್ಯಾರ್ಥಿನಿಯರು ಪಾಲಕ ಪೋಷಕರು ನೋಡಲೇಬೇಕಾದ ಚಿತ್ರವಾಗಿದೆ. ಬಾಬಾ ಸಾಹೇಬರ ಸಂವಿಧಾನದ ಮಾರ್ಗವಾಗಿ ಕಾನೂನುಗಳ ಸಹಾಯದಿಂದ ಪ್ರತಿಯೊಬ್ಬ ಹೆಣ್ಣು ಮಗುವು ಗಂಡಿನಷ್ಟೇ ಸಮಾನತೆಯನ್ನು ಹೊಂದಬಲ್ಲಳು ಎಂದು ತೋರಿಸಲಾಗಿದೆ ಎಂದರು.
ನಂತರ ಸಹ ನಟರಾಗಿ ಅಭಿನಯಿಸಿದ ತಾಲೂಕಿನ ಬೂದಗೂಂಪಾ ಗ್ರಾಮದ ಶಿವಕುಮಾರ್ ಮಾತನಾಡಿ, ಈ ಒಂದು ಚಿತ್ರದಲ್ಲಿ ಸಂದೇಶ ಅಣ್ಣನವರು ಹೊಸ ಪ್ರತಿಭೆಗಳನ್ನು ಗುರುತಿಸಿ ನಮ್ಮಂತವರಿಗೆ ಅವಕಾಶ ನೀಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶದಿಂದ ಚಿತ್ರ ನಿರ್ಮಿಸಲಾಗಿದ್ದು, ಚಿತ್ರೀಕರಣ ಸಮಯದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲಿ ಚಿತ್ರ ಮಾಡಬಾರದು ಎಂದು ಅನೇಕ ಫೋನ್ ಕರೆಗಳ ಮೂಲಕ ಚಿತ್ರೀಕರಣ ನಿಲ್ಲಿಸುವಂತೆ ಬೆದರಿಕೆಯನ್ನು ಹಾಕಿದ್ದರು. ಜೀವ ಬೆದರಿಕೆಯ ಜೊತೆಯಲ್ಲಿ ಯಶಸ್ವಿಯಾಗಿ ಚಿತ್ರೀಕರಣ ಮುಗಿದು ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಶೋಷಿತ ನೊಂದ ಹೆಣ್ಣಿಗೆ ಕಾನೂನಾತ್ಮಕವಾಗಿ ಜಯಗಳಿಸುವುದು ಹಾಗೂ ಮಹಿಳಾ ಸಮಾನತೆ ಸಾರುವ ಚಿತ್ರವಾಗಿದ್ದು, ಪ್ರತಿಯೊಬ್ಬರೂ ಬಂದು ಚಿತ್ರವನ್ನು ವೀಕ್ಷಣೆ ಮಾಡಬೇಕು ಎಂದರು.
“ಈ ಚಿತ್ರವು ಸಂವಿಧಾನದ ಶಕ್ತಿಯನ್ನು, ಮಹಿಳಾ ಸಮಾನತೆಯನ್ನು, ಶೋಷಿತ ವರ್ಗಗಳ ಅಭಿವೃದ್ಧಿಯನ್ನು, ನೊಂದ ಮಹಿಳೆಯರಿಗೆ ಆತ್ಮಸ್ಥೈರ ಹೇಳುವ ಏಕೈಕ ಸಿನಿಮಾವಾಗಿದ್ದು ಸರಕಾರ ಈ ಒಂದು ಚಿತ್ರವನ್ನು ರಾಜ್ಯದ ಪ್ರತಿಯೊಂದು ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಮಹಿಳಾ ಸಂಘ ಸಂಸ್ಥೆಯವರು ವೀಕ್ಷಣೆ ಮಾಡಲು ಆರ್ಥಿಕ ನೀಡುವ ಮೂಲಕ ಆದೇಶ ಹೊರಡಿಸಬೇಕು ಜೊತೆಗೆ ಇಂತಹ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು” ಎಂದು
ಹನುಮೇಶ ನಡುಲಮನಿ,ಜಿಲ್ಲಾಧ್ಯಕ್ಷರು, ಕರ್ನಾಟಕ ರಕ್ಷಣಾ ಸೇನೆ ಕೊಪ್ಪಳ ಇವರು ಸಿನಿಮಾ ತಮ್ಮ ಅನಿಸಿಕೆ ಹಂಚಿಕೊಂಡರು.