ಕೊಪ್ಪಳ/ಕುಷ್ಟಗಿ: ಸೆಪ್ಟೆಂಬರ್ ಐದು,ಇದು ಶಿಕ್ಷಣ ತಜ್ಞ, ರಾಜಕೀಯ ಮುತ್ಸದ್ದಿ, ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರ ಜನ್ಮದಿನ, ಅವರು ತಮ್ಮ ಜನ್ಮದಿನವನ್ನು ಶಿಕ್ಷಕ ಬಂಧುಗಳಿಗೆ ಅರ್ಪಿಸಿ, ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಿರಿ ಎಂದು ಹೇಳಿದ್ದರು ಅಂದಿನಿಂದ ಪ್ರತೀ ವರ್ಷ ಸೆಪ್ಟೆಂಬರ್ ಐದರಂದು
ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದಾರೆ.
ಕುಷ್ಟಗಿಯ ಪ್ರತಿಷ್ಟಿತ ಎಸ್. ವಿ.ಸಿ ಕಾಲೇಜಿನಲ್ಲಿ ಅಸಂಖ್ಯಾತ ವಿದ್ಯಾರ್ಥಿಗಳು ಬಹಳ ಸಂಭ್ರಮದಿಂದ ಶಿಕ್ಷಕರ ದಿನಾಚರಣೆ ಮಾಡಿದರು.
ವೇದಿಕೆ ಯ ಮೇಲೆ ಪ್ರಾಂಶುಪಾಲರಾದ ಗುರುಪ್ರಸಾದ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಗುರುಗಳ ಮಹತ್ವ ಸಾರುವ ಹಾಡಿನೊಂದಿಗೆ ಆರಂಭವಾಯಿತು.
ಕುಮಾರಿ ರೂಪಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ವೇದಿಕೆಯಲ್ಲಿ ವಿಜ್ಞಾನ ವಿಭಾಗದ ಉಪನ್ಯಾಸಕರಾದ ಶ್ರೀ ಓಂ ಕುಮಾರ ಮೇಟಿ,ವಿಜಯ ಕುಮಾರ್,ಸಂಗಮೇಶ,ಹಾಗೂ ಇಂಗ್ಲೀಷ್ ವಿಭಾಗದ ಉಪನ್ಯಾಸಕ ರಾಘವೇಂದ್ರ ಅವರು ಉಪಸ್ಥಿತರಿದ್ದು, ಶಿಕ್ಷಕರ ದಿನಾಚರಣೆಯ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ರಾಘವೇಂದ್ರ ಸರ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು, ವಿಜಯಕುಮಾರ್ ಅವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಕ್ರಮ ಮುಗಿದ ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಮನ ರಂಜನೆಯ ಕಾರ್ಯಕ್ರಮ ಗಳು ಯಶಸ್ವಿಯಾಗಿ ಜರುಗಿದವು.