ಕೊಪ್ಪಳ :ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ನಿಯಂತ್ರಣ ಘಟಕ ಕೊಪ್ಪಳ ಹಾಗೂ ಜಿಲ್ಲಾ ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಹಯೋಗದಲ್ಲಿ ದಿನಾಂಕ 13-9-2024 ರಂದು ಬೆಳಿಗ್ಗೆ 7.30 ಕ್ಕೆ ಜಿಲ್ಲಾ ಆಡಳಿತ ಭವನದಿಂದ ಜಿಲ್ಲಾ ಕ್ರೀಡಾoಗಣದ ಕೊಪ್ಪಳದವರೆಗೆ 5 km ಮ್ಯಾರಥಾನ್ ಎಚ್ ಐ ವಿ ಜಾಗೃತಿ ಓಟವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಓಟದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಈ ಕೆಳಗಿನಂತೆ ಬಹುಮಾನಗಳನ್ನು ಪಡೆದಿರುತ್ತಾರೆ.
ಕುಮಾರಿ ದೇವಮ್ಮ ಈರಣ್ಣ ಚಿಲಕಮುಖಿ ಇವರು ತೃತೀಯ ಸ್ಥಾನವನ್ನು ಪಡೆದು ರೂ.2500 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ಪಡೆದುರುತ್ತಾರೆ.
ಪವಿತ್ರ ಇವರು ನಾಲ್ಕನೇ ಸ್ಥಾನವನ್ನು ಪಡೆದು ರೂ.1000 ಗಳ ನಗದು ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಪಡೆದಿರುತ್ತಾರೆ.
ಭೂಮಿಕಾ ರಮೇಶ್ ಅವರು ಆರನೇ ಸ್ಥಾನವನ್ನು ಪಡೆದು ರೂ. 1000 ನಗದು ಸಮಾಧಾನಕರ ಬಹುಮಾನ ಪ್ರಶಸ್ತಿ ಪತ್ರವನ್ನು ಪಡೆದಿದ್ದಾರೆ.
ಕುಮಾರಿ ಐಶ್ವರ್ಯಾ ರಾಥೋಡ್ ಅವರು 8 ನೇ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರ ಪಡೆದಿರುತ್ತಾರೆ.
ಕುಮಾರಿ ಜ್ಯೋತಿ ಡಿ. ವಿ ಇವರು
9 ನೇ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರ ಪಡೆದಿರುತ್ತಾರೆ.
ಕುಮಾರಿ ಯೋಶೋಧ ಅವರು 11 ನೇ ಸ್ಥಾನವನ್ನು ಪಡೆದು ಪ್ರಶಸ್ತಿ ಪತ್ರ ಪಡೆದಿರುತ್ತಾರೆ.
ಈ ಎಲ್ಲಾ ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಕೆ ಲಮಾಣಿ,ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರದೀಪ್ ಕುಮಾರ್ ಯು, ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಗವಿಸಿದ್ದಪ್ಪ ಮುತ್ತಳ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ವಿಠೋಬ ಎಸ್, ಕಾಲೇಜಿನ ಎನ್. ಎಸ್. ಎಸ್ ಘಟಕದ ಸಂಚಾಲಕರಾದ ಡಾ. ನರಸಿಂಹ, ಭೋಗೋಳ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಅಶೋಕ ಕುಮಾರ ಕಾಲೇಜಿನ ಸಿಬ್ಬಂದಿಗಳಾದ ಅಲ್ಲಾಬಕ್ಷಿ, ಸೌಮ್ಯ ಹಿರೇಮಠ, ಹನುಮಪ್ಪ ಮತ್ತು ಕಾಲೇಜಿನ ಎಲ್ಲ ಭೋಧಕ ಭೋದಕೇತರ ಸಿಬ್ಬಂದಿಗಳು ಹಾಗೂ ಅತಿಥಿ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.