ಬನ್ನಿ ಕೊಟ್ಟು ಬಂಗಾರದಂಗೆ ಇರಬೇಕು
ಬನ್ನಿ ಕೊಟ್ಟು, ಬೆಳ್ಳಿ ಅಂಗೆ ತರಬೇಕು
ಬನ್ನಿ ಕೊಟ್ಟು ಎಲ್ಲರ ಭಾವನೆಯಲ್ಲಿ ಇರಬೇಕು
ಬನ್ನಿ ಕೊಟ್ಟು ಎಲ್ಲರನ್ನು ಗುರುತಿಸಬೇಕು
ಬನ್ನಿ ಕೊಡಬೇಕು ಮೊದಲು ತಾಯಿಗೆ
ಬನ್ನಿ ಕೊಡಬೇಕು ಮೊದಲು ತಂದೆಗೆ
ಬನ್ನಿ ಕೊಡಬೇಕು ಮೊದಲು ಗುರುವಿಗೆ
ಬನ್ನಿ ಕೊಡಬೇಕು ಮೊದಲು ಎಲ್ಲರಿಗೆ
ಬನ್ನಿ ಕೊಡುವಾಗ ನಮಸ್ಕಾರ ಮಾಡಬೇಕು
ಬನ್ನಿ ಕೊಡುವಾಗ ಒಳ್ಳೆ ಭಕ್ತಿ ತುಂಬಿರಬೇಕು
ಬನ್ನಿ ಕೊಡುವಾಗ ಒಳ್ಳೆ ಭಾವನೆ ತುಂಬಿರಬೇಕು
ಬನ್ನಿ ಕೊಡುವಾಗ ಆ ದೈವಲೀಲೆ ಇರಬೇಕು
ಬನ್ನಿ ಅನ್ನೋದು ಒಂದು ಹೆಣ್ಣಿನ ಶಕ್ತಿ ಅದು
ಬನ್ನಿ ಅನ್ನುವುದು ಹೆಣ್ಣು ಕೊಡುವ ಸಂಸ್ಕಾರ ಅದು
ಬನ್ನಿ ಅನ್ನುವುದು ಹೆಣ್ಣಿನ ಭಾವನೆ ರೂಪದು
ಬನ್ನಿ ಅನ್ನುವುದು ಒಂದು ಹೆಣ್ಣಿನ ರೂಪ ರಕ್ಷಣೆ ಅದು
-ಅಕ್ಕಮಹಾದೇವಿ ಅಂಗಡಿ,ರಾಜೂರು
ಕುಕನೂರು ತಾ. ಕೊಪ್ಪಳ ಜಿ.