ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಕೊಪ್ಪಳ ಇವರ ಸಹಯೋಗದೊಂದಿಗೆ ದಿನಾಂಕ 08/10/2024 ರಂದು ಕಾರಟಗಿ ತಾಲೂಕಿನ ಶಾಲಿಗನೂರು ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆಯುಷ್ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು, ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀ ಬಸಪ್ಪ ಕೊಟ್ಟಲ್ ಶಾಲಿಗನೂರ್ ಇವರು ವಹಿಸಿದ್ದರು.ಆಯುಷ್ಇಲಾಖೆಯಿಂದ ಮುದ್ರಿಸಲಾದ ಆಯುರ್ವೇದ ಚಿಕಿತ್ಸಾ ಮಾಹಿತಿ ಒಳಗೊಂಡಿರುವ ಬಿತ್ತಿ ಪತ್ರಗಳನ್ನು ಬಿತ್ತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು ,ಸರಕಾರಿ ಆಯುರ್ವೇದ ಚಿಕಿತ್ಸಾಲಯ ನಂದಿಹಳ್ಳಿಯ ವೈದ್ಯಾಧಿಕಾರಿಗಳಾದ
ಡಾ: ಶಿವಲಿಂಗಪ್ರಭು ಸುಂಕದ, ರೋಗಿಗಳ ತಪಾಸಣೆ ಕೈಗೊಂಡರು. ವಾತವ್ಯಾಧಿ, ಕಟಿಶೂಲ, ಸಂಧಿವಾತ, ಅಜೀರ್ಣ, ಮಲಬದ್ಧತಾ, ಶಿರಶೂಲ, ಮುಂತಾದ ರೋಗಗಳಿಗೆ ಒಟ್ಟು 84 ರೋಗಿಗಳಿಗೆ ಚಿಕಿತ್ಸೆ ನೀಡಿದರು, ಯೋಗ ತರಬೇತಿದಾರರಾದ ಬಸವರಾಜ್ ಹಾಗೂ ಜಯಶರಣಮ್ಮ ರೋಗಕ್ಕೆ ಅನುಸಾರವಾಗಿ ರೋಗಿಗಳಿಗೆ ಪ್ರಾಣಾಯಾಮ ಹಾಗೂ ಯೋಗಾಸನಗಳನ್ನು ಹೇಳಿಕೊಟ್ಟರು, ಶರಣಬಸವ ಔಷಧ ವಿತರಿಸಿದರು, ಆಶಾ ಕಾರ್ಯಕರ್ತೆ ಈರಮ್ಮ ರೋಗಿಗಳನ್ನು ಕರೆದುಕೊಂಡು ಬರುವಲ್ಲಿ ನೆರವಾದರು,ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಊರಿನ ಹಿರಿಯರು ಪಾಲ್ಗೊಂಡಿದ್ದರು. ಊರಿನ ನಾಗರಿಕರು ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಂಡರು.
