ಕನಸುಗಳೆಲ್ಲಾ ಅರೆಜೀವ ಹಿಡಿದು
ನನ್ನತ್ತ ನೋಡುತ್ತಾ ಜೋತುಬಿದ್ದಿದ್ದವು
ನನ್ನ ಕೊರಳಿಗೆ
ನಾ ಸೋತ ಘಳಿಗೆ
ಛಲ ಬಿಡದೆ ದುಡಿದು ದಣಿದ
ಪರಿಶ್ರಮಗಳೆಲ್ಲಾ ಕಾಯುತ್ತಿದ್ದವು
ಉತ್ತರಗಳಿಗೆ
ನಾ ಸೋತ ಘಳಿಗೆ
ಭರವಸೆಗಳೆಲ್ಲಾ ಬತ್ತಿ
ಬರಿದಾಗುತ್ತಿತ್ತು ಬಯಕೆಯ
ಜೋಳಿಗೆ
ನಾ ಸೋತ ಘಳಿಗೆ
ಅವಶ್ಯಕತೆಯ ಅವಲಂಬಿತ
ಸಂಬಂಧಗಳು ತೊರೆದವು
ನನ್ನ ಬೆಸುಗೆ
ನಾ ಸೋತ ಘಳಿಗೆ
ಖಾಲಿಯಾದರೂ ಸಾಯದ ಎದೆಗೆ
ಬರಮಾಡಿಕೊಳ್ಳಲು ಸಿದ್ದನಾಗುತ್ತಿದ್ದೆ
ಅವಮಾನಗಳಿಗೆ
ನಾ ಸೋತ ಘಳಿಗೆ
ಕತ್ತಲಲ್ಲಿ ಒಬ್ಬಂಟಿಗನಾಗಲು ಬಿಡದೆ
ಹಿಂಬಾಲಿಸಿ ಬಂದವು ಕಣ್ಣೀರು
ಜೊತೆಗೆ
- ಮಂಜುನಾಥ ಮೇಟಿ

2 Responses
Nice manju keep it y
ಮಂಜುನಾಥ್ ಮೇಟಿ ಅವರು ನಮ್ಮ ಕನ್ನಡ ಸಾಹಿತ್ಯದ ಯುವ ಸಾಹಿತಿ ಆಗಿ ಹೊರ ಹೊಮ್ಮಲಿ ಎಂದು ಆಶಿಸುತ್ತೆವೆ.