ಕೊಪ್ಪಳ :ಅಕ್ಬೋಬರ್ 23, ಬ್ರಿಟಿಷ್ ರ ವಿರುದ್ದ ಸಿಡಿದೆದ್ದ ವೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಅವರದು ದೊಡ್ಡ ಹೆಸರು ಇದೆ. ರಾಜ್ಯದ ಮೊದಲು ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಮಹಿಳೆಯರು ಕೂಡ ಯುದ್ಧಗಳನ್ನು ಮಾಡಿ ಗೆಲ್ಲ ಬಲ್ಲರು ಎಂಬದನ್ನು ರಾಣಿ ಚೆನ್ನಮ್ಮ ತೋರಿಸಿಕೊಟ್ಟಿದ್ದಾರೆ ಇಂದಿನ ಮಹಿಳೆಯರು ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಮುಂದೆ ಬನ್ನಿ ಎಂದು ಹೇಳಿದರು.
ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗವಿಸಿದ್ದಪ್ಪ ಮುತ್ತಳ ಅವರು ಮಾತನಾಡಿ ಕಿತ್ತೂರು ರಾಣಿ ಚೆನ್ನಮ್ಮ ಅವರು ತಮ್ಮ ತನು, ಮನ, ಧನದಿಂದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ್ದಾರೆ. ದತ್ತು ಮಕ್ಕಳಿಗೆ ಹಕ್ಕು ಇಲ್ಲ ಕಾಯ್ದೆ ವಿರುದ್ಧ ಹೋರಾಟ ಮಾಡಿದ್ದಾರೆ. ನಾವು ರಾಣಿ ಚೆನ್ನಮ್ಮ ನಂತಹ ಹೋರಾಟಗಾರರ ತ್ಯಾಗವನ್ನು ಸ್ಮರಿಸಬೇಕು, ಅವರ ಆದರ್ಶಗಳನ್ನು ಪಾಲಿಸಬೇಕು, ಅವರ ಹೋರಾಟವನ್ನು ಗೌರವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಸಂಗೀತ ಮುತ್ತಳ ಮತ್ತು ಕವಿತ ಕಿತ್ತೂರು ರಾಣಿ ಚನ್ನಮ್ಮ ಅವರ ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಹುಲಿಗೆಮ್ಮ ಬಿ, ಶ್ರೀ ವಿಠೋಬ ಎಸ್, ಡಾ. ಪ್ರದೀಪ್ ಕುಮಾರ್, ಡಾ. ಮಲ್ಲಿಕಾರ್ಜುನ ಬಿ, ಡಾ. ನರಸಿಂಹ, ಶ್ರೀ ಮತಿ ಸುಮಿತ್ರಾ ಎಸ್. ವಿ, ಶ್ರೀ ಮತಿ ಸೌಮ್ಯ ಹಿರೇಮಠ, ಮನುಮಪ್ಪ,ಶಿವಪ್ರಸಾದ್ ಹಾದಿಮನಿ, ಶಿವಪ್ಪ ಬಡಿಗೇರ, ಶ್ರೀ ಕಾಂತ್, ಕಾಲೇಜಿನ ಅತಿಥಿ ಉಪನ್ಯಾಸಕರು, ಭೋದಕ, ಭೋದಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ನಿರೂಪಿಸಿ, ವಂದಿಸಿದರು.