ಇದುವೇ ಸ್ವರ್ಗವು,
ಇಲ್ಲಿ ಜನಿಸುವುದೇ ಪುಣ್ಯವು. ||ಪ||
ಸಾಮ್ರಾಜ್ಯ ಕಟ್ಟಿ ಆಳಿದ ರಣಕಲಿಗಳು
ಬಿತ್ತಿ ಬೆಳೆಸಿದರು ಭವ್ಯ ಪರಂಪರೆಯನು
ರಚಿಸಿ ಕವಿಗಣ ಸಾಹಿತ್ಯ ಕೃತಿ ಹಲವು
ತೋರಿಸಿದರು ಜಗಕೆ ಕನ್ನಡದ ಬಲವು
ಇದುವೇ ಸ್ವರ್ಗವು,
ಇಲ್ಲಿ ಜನಿಸುವುದೇ ಪುಣ್ಯವು.||೧||
ವಚನಗಳ ಮುಖೇನ ಹರಿಸಿ ಅರಿವು
ದಾಸವರೇಣ್ಯರ ಕೀರ್ತನೆಗಳ ಚೆಲುವು
ಪಿಕಶುಕಗಳ ಮಧುರ ಕಂಠದ ಕೊಳಲು
ನದಿ ಜಲಪಾತ ಧುಮ್ಮಿಕ್ಕಿಹ ಸೊಬಗು
ಇದುವೇ ಸ್ವರ್ಗವು,
ಇಲ್ಲಿ ಜನಿಸುವುದೇ ಪುಣ್ಯವು.||೨||
ಗುಡಿ ಗೋಪುರ ಶಿಖರಗಳ ಸಾಲು
ಕಾಮಧೇನು ನೀಡಿಹಳು ನೊರೆ ಹಾಲು
ಶಿಲ್ಪಕಲಾ ನಾಟ್ಯ ಮೇಳೈಸಿಹವು
ಭರತಮಾತೆಯ ಕುವರಿ ಮೈದಳೆದಿಹಳು
ಇದುವೇ ಸ್ವರ್ಗವು,
ಇಲ್ಲಿ ಜನಿಸುವುದೇ ಪುಣ್ಯವು.||೩||
ಹಚ್ಚ ಹಸಿರು ಕಾಡು ಮೇಡು
ನಡುನಡುವೆ ಝರಿಯ ಜಾಡು
ಮಾಮರ ಕೋಕಿಲ ಗಾನದ ಇಂಪು
ಸುತ್ತಲೂ ಬೀರಿದೆ ಕನ್ನಡ ಕಸ್ತೂರಿ ಕಂಪು
ಇದುವೇ ಸ್ವರ್ಗವು,
ಇಲ್ಲಿ ಜನಿಸುವುದೇ ಪುಣ್ಯವು.||೪||
ಜಯವಾಗಲಿ ಕರುನಾಡ ಮಾತೆಗೆ
ಎತ್ತೋಣ ಆರತಿ ಭುವನೇಶ್ವರಿಗೆ
ವೈಭವದ ಇತಿಹಾಸವಿರುವ ಭೂಮಿ
ಕರ್ನಾಟಕವೇ ಇದು ಪುಣ್ಯಭೂಮಿ
ಇದುವೇ ಸ್ವರ್ಗವು,
ಇಲ್ಲಿ ಜನಿಸುವುದೇ ಪುಣ್ಯವು.||೫||
ರಚನೆ:ಬಸವರಾಜ ಐಲಿ ಶಿಕ್ಷಕರು, ಸ.ಮಾ.ಹಿ.ಪ್ರಾ.ಶಾಲೆ,ಹುಲಿಹೈದರ,ಕೊಪ್ಪಳ ಜಿಲ್ಲೆ.
ದೂ.ಸಂಖ್ಯೆ:೮೧೯೭೫೧೧೨೪೫