ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಶ್ರೀ ಗವಿಸಿದ್ಧೇಶ್ವರ ಡಿಜಿಟಲ್ ಗ್ರಂಥಾಲಯದ 28 ವಿದ್ಯಾರ್ಥಿಗಳು ಪೋಲೀಸ್ ಇಲಾಖೆಗೆ ಆಯ್ಕೆ

ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ 24×7 ಡಿಜಿಟಲ್ ಗ್ರಂಥಾಲಯದ 28 ವಿದ್ಯಾರ್ಥಿಗಳು ಪೋಲೀಸ್ ಇಲಾಖೆಗೆ ಆಯ್ಕೆ.

ಕೊಪ್ಪಳ: ಶ್ರೀ ಗವಿಮಠ ತ್ರಿವಿಧ ದಾಸೋಹದ ನೆಲೆಯಾಗಿದೆ. 2021ರ ಕರೋನಾ ಮಹಾಮಾರಿಯ ಹಾವಳಿಯ ಸಂದರ್ಭದಲ್ಲಿ 24×7 ಡಿಜಿಟಲ್ ಗ್ರಂಥಾಲಯವನ್ನು ಗವಿಸಿದ್ಧೇಶ್ವರ ಮಹಾವಿದ್ಯಾಲಯದಲ್ಲಿ ಜನವರಿ 2021 ರಲ್ಲಿ ಸ್ಥಾಪಿಸುವುದರ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಕೊಡುಗೆಯನ್ನು ಶ್ರೀ ಗವಿಮಠವು ನೀಡಿದೆ.
ಈ ಗ್ರಂಥಾಲಯದಲ್ಲಿ ಪದವಿ ಮುಗಿಸಿ ವಿವಿಧ ಸರಕಾರಿ ಕೆಲಸಕ್ಕೆ ತಯಾರಿ ನಡೆಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಅವಕಾಶವನ್ನು ಕಲ್ಪಿಸಲಾಗಿದೆ. ಸದರಿ ಗ್ರಂಥಾಲಯದ ಮೂರು ವರ್ಷಗಳ ಅವಧಿಯಲ್ಲಿ ಸುಮಾರು 1800 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತರ ಕರ್ನಾಟಕ ಹಾಗೂ ಹಾಸನ, ಮಂಡ್ಯ, ಚಿಕ್ಕಮಂಗಳೂರು, ರಾಯಚೂರು, ಬೀದರ, ಬಳ್ಳಾರಿ, ಹೊಸಪೇಟೆ, ಕೊಪ್ಪಳ, ಗುಲ್ಬರ್ಗ ಸೇರಿದಂತೆ ಇಲ್ಲಿಯವರೆಗೆ ಒಟ್ಟು 16 ಜಿಲ್ಲೆಗಳಿಂದ ಆಗಮಿಸಿ ಇದರ ಉಪಯೋಗ ಪಡೆದಿದ್ದಾರೆ ಹಾಗೂ ಪಡೆಯುತ್ತಿದ್ದಾರೆ. ಸದ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ಪರೀಕ್ಷೆಗಾಗಿ ತಯಾರಿ ನಡೆಸಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಗ್ರಂಥಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕಳೆದ ಈ ಮೂರು ವರ್ಷಗಳಲ್ಲಿ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸರಕಾರಿ ಹುದ್ದೆಗಳನ್ನು ಪಡೆಯುವ ಮೂಲಕ ತಮ್ಮ ಜೀವನವನ್ನು ಹಸನಾಗಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದ ಜನವರಿ 2024ರಲ್ಲಿ ಪೋಲೀಸ್ ಕಾನ್ಸ್ಟೇಬಲ್ ಹುದ್ದೆಗಾಗಿ ನಡೆದ ಪರೀಕ್ಷೆಯಲ್ಲಿ ಶ್ರೀ ಗವಿಸಿದ್ಧೇಶ್ವರ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯದ 24×7 ಡಿಜಿಟಲ್ ಗ್ರಂಥಾಲಯದ 28 ವಿದ್ಯಾರ್ಥಿಗಳು ಪೋಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ. ಇದಲ್ಲದೆ 9 ವಿದ್ಯಾರ್ಥಿಗಳು ಶಿಕ್ಷಣ ಇಲಾಖೆಗೆ ಶಿಕ್ಷಕರಾಗಿ, 2 ವಿದ್ಯಾರ್ಥಿಗಳು ಅಕೌಂಟೆಂಟ್ ಹುದ್ದೆಗಳಿಗೆ, 2 ವಿದ್ಯಾರ್ಥಿಗಳು ಅಸಿಸ್ಟೆಂಟ್ ಇಂಜಿನಿಯರ್, 2 ವಿದ್ಯಾರ್ಥಿಗಳು ಲೈಬ್ರರಿ ಇನ್ಸ್ಟ್ರಕ್ಟರ್, ಒಬ್ಬ ವಿದ್ಯಾರ್ಥಿನಿ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗಿರುವುದು ತುಂಬಾ ಸಂತೋಷದಾಯಕ ವಿಷಯವಾಗಿದೆ. ಪ್ರಸಕ್ತ ವರ್ಷದಲ್ಲಿ ಏಕಕಾಲಕ್ಕೆ ಪೋಲೀಸ್ ಇಲಾಖೆಗೆ ಆಯ್ಕೆಯಾದ ಗ್ರಂಥಾಲಯದ 28 ವಿದ್ಯಾರ್ಥಿಗಳನ್ನು ಮತ್ತು ವಿವಿಧ ಸರಕಾರಿ ಹುದ್ದೆಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಕರೆಸಿ ಅಭಿನಂದಿಸಿ, ಶ್ರೀಮಠದಿಂದ ಸನ್ಮಾನಿಸಿ, ಶುಭ ಹಾರೈಸಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ