ಹುಟ್ಟಿದ ನೆಲದಲ್ಲಿ ಹಳಿಯುತ್ತಿದೆ ಕನ್ನಡ.
ಪರಭಾಷೆ ಏಳಿಗೆಗೆ ಸಹಕಾರಿಯೂ ನೋಡ.
ಕಣ್ಣೆದುರೆ ಆಂಗ್ಲ ಭಾಷೆಯ ಪರಾಕಾಷ್ಟೆಯು.
ನವೆಂಬರ್ ಬಂದಾಗ ಕನ್ನಡಿಗರಿಗೆ ಪ್ರತಿಷ್ಠೆಯು.!!೧!!
ಎತ್ತಿ ಹಿಡಿಯಬೇಕಾಗಿದೆ ನಾಡ ಧ್ವಜವನ್ನು.
ಮಮತೆಯಿಂದ ಬೆಳೆಸಿದ ಭುವನೇಶ್ವರಿಯನ್ನು.
ಕನ್ನಡ ನೆಲ ಜಲಕ್ಕಾಗಿ ಜೀವವನ್ನು ನೀಡು.
ಮಾತೃಭಾಷೆಯನ್ನು ಉಸಿರಾಗಿಸಿ ಹಾಡು.!!೨!!
ರನ್ನ ಪಂಪ ಜನ್ನರು ನೆಲೆಸಿದ ನಾಡು.
ಕವಿ ದಾಸ ಶ್ರೇಷ್ಠರ ಹೆಮ್ಮೆಯ ಬಿಡು.
ಸಾಹಿತ್ಯ ಶಿಲ್ಪ ಕಲೆ ಪಸರಿಸಿರುವುದು ನೋಡು.
ವಚನ ಕೀರ್ತನೆಗಳ ಸಾರವನ್ನು ನೀನೊಮ್ಮೆ ಹಾಡು.!!೩!!
ಗಂಗೆ,ತುಂಗೆ, ಕಾವೇರಿ ನದಿಗಳ ಜಾಡು.
ಜೋಗದ ಜಲಪಾತದ ರಮಣೀಯತೆಯನ್ನು ನೋಡು.
ಬೇಲೂರು ಹಳೇಬೀಡು ಸಿರುವಂತಿಕೆ ನಾಡು.
ಜಕಣಾಚಾರಿ ಕೆತ್ತಿದ ವಾಸ್ತುಶಿಲ್ಪತೆಯನ್ನು ಒಮ್ಮೆ ನೋಡು.!!೪!!
ಸರ್ಕಾರಿ ಶಾಲೆಯಲ್ಲಿ ಕನ್ನಡವೇ ಮಾಯ.
ಇಂಗ್ಲಿಷಿನ ವ್ಯಾಮೋಹವು ಪಸರಿಸಿರುವುದು ನೋಡು.
ಉಸಿರಿರುವ ತನಕ ಕನ್ನಡವ ಮಾತನಾಡು.
ಕರುನಾಡ ಚರಿತ್ರೆಯ ಪುಟವ ತಿರುವಿ ನೋಡು.!!೫!!
-ಎಂ ಚಂದ್ರಶೇಖರ ಚಾರಿ ,ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ.