ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದ ವಾರ್ಡ್ ನಂಬರ್ 01 ಸಾಮಾನ್ಯ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಶ್ರೀ ಮತಿ ಸಾವಿತ್ರಿ ಗಂಡ ದುರುಗಪ್ಪ ಸುಂಡಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಪ್ರಸ್ತುತ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದ್ದರೂ ಕಾಂಗ್ರೆಸ್ ನಿಂದ ನಾಮಪತ್ರ ಸಲ್ಲಿಸಿದ್ದ ಶ್ರೀಮತಿ ಸಾವಿತ್ರಿ ಗಂಡ ದುರುಗಪ್ಪ ಸುಂಡಿ ಇವರು ಪ್ರಸ್ತುತ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿ ಬಿಜೆಪಿ ಪಕ್ಷದ ಬೆಂಬಲದಿಂದ ವಾರ್ಡ್ 01 ರ ಬಿಜೆಪಿ ಬೆಂಬಲಿತ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾದ ಇವರಿಗೆ ಪಕ್ಷದ ಮುಖಂಡರು, ಬೆಂಬಲಿಗರು, ಹಿತೈಷಿಗಳು ಶುಭ ಕೋರಿದರು.
ಈ ಸಂದರ್ಭದಲ್ಲಿ ರಾಜಾ ಶರತ್ ಚಂದ್ರ ನಾಯಕ, ಮಾಜಿ ಜಿಲ್ಲಾ ಪಂಚಾಯತಿ ಕೆಡಿಪಿ ಸದಸ್ಯ ಗುರನಗೌಡ ಪಾಟೀಲ್ , ಮುಖಂಡರಾದ ಜಿಲಾನ್ ಸಾಬ್, ಮನೋಹರ್ ದೊರೆ, ಆದಪ್ಪ ಗದ್ದಿ, ಭೀಮಣ್ಣ ಹೂಗಾರ್, ನರಸನಗೌಡ, ಶಿವಪುತ್ರಪ್ಪ ರವರು ಭಾಗಿಯಾಗಿದ್ದರು.
-ಕರುನಾಡ ಕಂದ