ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ 14 ವರ್ಷ ಕಾಲ ಢಣಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿದ ಕವಿತಾ ಶಿಕ್ಷಕಿ ಅವರಿಗೆ ಹೃದಯ ಸ್ಪರ್ಶ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.

ಈ ವೇಳಾ ಶಾಲೆಯ ಮಕ್ಕಳಿಂದ ಪುಷ್ಪಗಳಿಂದ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು,ಕಲಾವಿದರಾದ ಈ ಚಿದಾನಂದಪ್ಪ ಮಾತನಾಡಿ ಶಿಕ್ಷಕಿ ಕವಿತಾ ಅವರು ಉತ್ತಮ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ ಮಕ್ಕಳ ಮನದಲ್ಲಿ ನೆಲೆಸಿದ್ದಾರೆ ಎಂದರು.
ಸ.ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕರಾದ ಹುಚ್ಚಿರಪ್ಪ ಶಿಕ್ಷಕರು ಮಾತನಾಡಿ ಕವಿತಾ ಶಿಕ್ಷಕಿ ಅವರು ಉತ್ತಮ ಸೇವೆ ಸಲ್ಲಿಸಿ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದು ಶಾಲೆಯ ಕೀರ್ತಿ ಹೆಚ್ವಿಸಿದ್ದಾರೆ ಮಕ್ಕಳಿಗೆ ಸರಳವಾಗಿ ಅರ್ಥವಾಗುವಂತೆ ಪಾಠ ಹೆಳಿಕೊಡುತ್ತಿದ್ದರು ನಮ್ಮ ಶಾಲೆಯ ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕಿಯಾಗಿದ್ದರು ಬಹಳ ದೂರದಿಂದ ಬಂದು ನಮ್ಮ ಭಾಗದಲ್ಲಿ ಹೊಂದಾಣಿಕೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸಿದ್ದಾರೆ,ಕವಿತಾ ಶಿಕ್ಷಕಿಯರ ಸಹದ್ಯೋಗಿ ಶಿಕ್ಷಕಿಯಾದ ಜ್ಯೋತಿ ಅವರು ಮನದಾಳದಿಂದ ಮಾತನಾಡಿ ಅವರ ನಮ್ಮ
ಸ್ನೇಹ ಈ ಶಾಲೆಯಲ್ಲಿ ಹದಿಮೂರು ವರ್ಷಗಳ ಸುದೀರ್ಘ ಸ್ನೇಹದೊಂದಿಗೆ ಸಹೋದರಿಯಾಗಿ , ತಾಯಿಯಾಗಿ ನಮಗೆ ಮಾರ್ಗದರ್ಶಕರಾಗಿ ಜೊತೆಯಾಗಿ ಕಾರ್ಯ ನಿರ್ವಹಿಸಿದ ಕ್ಷಣಗಳು ಮರೆಯಲಾಗದ ನೆನಪುಗಳಾಗಿವೆ ಎಂದರು.
ವರ್ಗಾವಣೆಗೊಂಡ ಕವಿತಾ ಶಿಕ್ಷಕಿಯವರು ಮನದಾಳದ ಮಾತು ಪ್ರಾರಂಭಿಸಿ ಭಾವನಾತ್ಮಕವಾಗಿ ಶಾಲೆಯಲ್ಲಿ ಕಳೆದಿರುವ ದಿನಗಳ ಬಗ್ಗೆ ಮಾತಾನಾಡಿದರು. ಡಣಾಪೂರ ಶಾಲೆಯಲ್ಲಿ ತವರುಮನೆಯಂತೆ ಜೀವನ ಕಲಿಸಿದೆ ಎಂದರು.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷೆ ಅಕ್ಕಮಹಾದೇವಿ ಉಪಾಧ್ಯಕ್ಷ ಆನಂದಪ್ಪ ,
ಗ್ರಾಂ.ಪಂ.ಅಧ್ಯಕ್ಷರಾದ ವೀರೇಶ ಗೌಡ ಗ್ರಾಮದ ಮುಖಂಡರಾದ ಅಯ್ಯಪ್ಪ , ಈ .ಚಿದಾನಂದಪ್ಪ ,ನಾಗಪ್ಪ , ಹೊನ್ನೂರಪ್ಪ ,ಶಿವಣ್ಣ, ಆಡಳಿತ ಮಂಡಳಿ ಸದಸ್ಯರು ಭೈರಪ್ಪ , ನಾಗರಾಜಗೌಡ , ಗಣೇಶ , ಶಾರದಮ್ಮ , ಮಹಾಂಕಳಮ್ಮ , ಸಲೀಮಾ ಹಾಗೂ ಶಾಲೆಯ ಮುಖ್ಯಗುರುಗಳಾದ ವೆಂಕಟೇಶ , ಹುಚ್ಚೀರಪ್ಪ , ಚಂದ್ರಶೇಖರ ಜಾಪಾಳ,ಅಯ್ಯನಗೌಡ , ಮಾಲತೇಶ
ಜ್ಯೋತಿ, ಅಂಜನಾದೇವಿ , ಶಿವುಕುಮಾರ ,ಲಿಂಗಪ್ಪ , ಶರಣಬಸವ , ಫಕೀರಪ್ಪ , ಶಿಕ್ಷಕ ಶಿಕ್ಷಕಿಯರು ಮುದ್ದು ಮಕ್ಕಳು, ಗ್ರಾಮದ ಹಿರಿಯರು ,ಹಳೆ ವಿದ್ಯಾರ್ಥಿಗಳು ಭಾಗಿ ಇದ್ದು ಯಶಸ್ವಿಗೊಳಿಸಿದರು.
