ಈ ಏಕಾಂತದಲ್ಲಿ ಏನೆಲ್ಲ ಅಡಗಿದೆ
ಗೆಳತಿ ,
ಅದರಲ್ಲಿ ಅಸಂಖ್ಯಾತ ಕನಸುಗಳು
ಕೊನೆಗೊಳ್ಳುವ ಹಂತದಲ್ಲಿ
ಮತ್ತೆ ಚಿಗುರೊಡೆಯುತ್ತವೆ,
ಸ್ವಾರ್ಥವಿಲ್ಲದೆ ಪ್ರೇಮಿಸಿಕೊಂಡವರು
ಯಾರದ್ದೋ ಭಯದಲ್ಲಿ ಕಾಲ
ಕಳೆಯುತ್ತಿರುವುದು ಇದೇ ಏಕಾಂತದಲ್ಲಿ,
ನಿದ್ದೆಗಣ್ಣಿನ ಕನಸಿನಲ್ಲಿ ದಿಗ್ಭ್ರಮೆಗೊಂಡು
ಹೆದರಿಕೊಂಡಿದ್ದಕ್ಕೆ ಕಾರಣ ಇದೇ
ಏಕಾಂತವಲ್ಲವಾ..?
ಮನಸ್ಸು ಬಿಗಿಗೊಂಡು ಗೊಂದಲದಲ್ಲಿ
ಪ್ರಶ್ನಿಸುತ್ತಿರುವಾಗ, ಉತ್ತರ ಕಂಡಿದ್ದು
ಏಕಾಂತದ ಮೊರೆ ಹೋದಾಗ…
- ಆನಂದಿರಾಜಶೇಖರ
