ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಭೋಳೊಡಿ ಬಸವೇಶ್ವರ ಶಿವಯೋಗಿ ಸಂಸ್ಥಾನ ಮಠ ಹೆಬ್ಬಾಳ ಗ್ರಾಮದಲ್ಲಿ ಜಗದೊಡೆಯ ಶ್ರೀ ಗುರು ಬೋಳೊಡಿ ಬಸವೇಶ್ವರ ಶ್ರೀ ಕಂತೆ ಒಡೆಯ ಶಿವಯೋಗಿಗಳ ರಥೋತ್ಸವ ಕಾರ್ಯಕ್ರಮ ಜರುಗಿತು.
ಬ್ರಾಹ್ಮೀ ಮುಹೂರ್ತದಲ್ಲಿ ರುದ್ರಾಭಿಷೇಕ ಸಹಸ್ರ ಬಿಲ್ವ ತುಲಾಭಾರ ಸೇವೆಗಳು ಗ್ರಂಥ ಬಿಡುಗಡೆ ಜಗದ್ಗುರು ಶ್ರೀ ಎಡಯೂರ ಸಿದ್ದಲಿಂಗೇಶ್ವರ ಅಷ್ಟೋತ್ತರ ಶತನಾಮಾವಳಿ , ಮಾನವನಾಗು (ಹೈಕು ಸಂಪದ) ಮಾನವನಾಗು ಹೈಕು ಸಂಪದ ಪುಸ್ತಕವನ್ನು ಡಣಾಪೂರ ಗ್ರಾಮದ ಹನುಮೇಶ ಭಾವಿಕಟ್ಟಿ ಡಣಾಪೂರ ಅವರ ಮಗಳ ಕೃಷಿ ನಾಮಕರಣ ಅಂಗವಾಗಿ ನಾವು ರಚಿಸಿರುವ ಹೈ ಕೂ ಸಂಪದ ಪುಸ್ತಕ ಹಾಗೂ 101 ಗಿಡಗಳನ್ನು ನಡೆವ ಮೂಲಕ ಸಾಹಿತ್ಯ ಬೆಳವಣಿಗೆಯನ್ನು ಹಾಗೂ ಪರಿಸರ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಎಂದು ಹೆಬ್ಬಾಳ ಶ್ರೀಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಶ್ರೀ ವಾಮದೇವ ಶ್ರೀಗಳು ಅಂಕಲಿಮಠದ ಶ್ರೀ ವೀರಭದ್ರಸ್ವಾಮಿಗಳು , ಮೈನಳ್ಳಿ ಸಿದ್ದೇಶ್ವರ ಶ್ರೀಗಳು, ಇಟಗಿ ಶ್ರೀಗಳು ಶಾಂತವೀರ ಶಿವಾಚಾರ್ಯರು ,ಕೊಪ್ಪಳ ಶಾಖಾಮಠ ಹೂವಿನಹಡಗಲಿ ಡಾ.ಹೀರಾ ಶಾಂತವೀರ ಸ್ವಾಮಿಗಳು ,ಕಂಪಸಾಗರದ ನಾಗಯ್ಯ ಸ್ವಾಮಿಗಳು , ರೌಡಕುಂದದ ಶಿವಾಚಾರ್ಯ ಮಹಾಸ್ವಾಮಿಗಳು , ತಲಕಾಲ ಮಠದ ವೀರಭದ್ರ ಶರಣರು ,ಸಂತೆ ಕವಲೂರ ಮಾಂತಲಿಂಗ ಶಿವಚಾರ್ಯರು ,ಗೊರೆಬಾಳ ಮರಳುಸಿದ್ದೇಶ್ವರ ಮಠದ ಡಾ.ಸಿದ್ದಯ್ಯ ತಾತನವರು , ಕುಮಾರ ಸ್ವಾಮಿಗಳು ಉಡಾ ,ಬಸಯ್ಯ ತಾತನವರು ಇದ್ದರು.
