ರಾಯಚೂರು ಜಿಲ್ಲೆಯ ಸಿಂಧನೂರು ನಗರದ PWD ಕ್ಯಾಪ್ ನಲ್ಲಿರುವ ವನಸಿರಿ ಫೌಂಡೇಷನ್ ವತಿಯಿಂದ ಮರುಜೀವ ಪಡೆದು ಕೊಪ್ಪಳದ ಗವಿಸಿದ್ದೇಶ್ವರ ಅಮೃತ ಹಸ್ತದಿಂದ ಅಮರ ಶ್ರೀ ಎಂದು ನಾಮಕರಣಗೊಂಡ ಆಲದ ಮರಕ್ಕೆ ಮಧ್ಯಮ ವರ್ಗದ ಏಳಿಗೆಗಾಗಿ ಕೇಂದ್ರ ಸರ್ಕಾರ ಕೈಗೊಂಡ ಮಹತ್ವಕಾಂಕ್ಷೆ ಯೋಜನೆ”ಪಿ.ಎಂ.ವಿಶ್ವಕರ್ಮ ಯೋಜನೆ”.
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಂಧನೂರಿನಲ್ಲಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿದಾರರು ಪರಿಸರ ಕಾಳಜಿಗೆ,ಪರಿಸರ ಸಂರಕ್ಷಣೆಗೆ ಹೆಸರುವಾಸಿಯಾದ ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ವನಸಿರಿ ಫೌಂಡೇಷನ್ ಪರಿಸರ ಕಾಳಜಿಯ ಕಾರ್ಯ ನೋಡಲೆಂದು
ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿದ ವೀಕ್ಷಣೆ ಮಾಡಿದರು. ನಂತರ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ 51 ಸಸಿಗಳನ್ನು ನೆಡಲಾಯಿತು.
ವನಸಿರಿ ಪೌಂಡೇಷನ್ ಕಲ್ಯಾಣ ಕರ್ನಾಟಕದದ್ಯಾತ ಅತೀ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಆಕ್ಸಿಜನ್ ಕ್ರಾಂತಿ ಮಾಡಲು ಪಣ ತೊಟ್ಟಿದೆ. ಈ ಕ್ರಾಂತಿಗೆ ಪಿ ಎಂ ವಿಶ್ವಕರ್ಮ ತರಬೇತಿದಾರರಿಂದ ತಲಾ ಒಂದೊಂದರಂತೆ ನಗರದ ಸಂಚಾರಿ ಪೊಲೀಸ್ ಠಾಣೆಯ ಆವರಣದಲ್ಲಿ ಸುಮಾರು 51 ಸಸಿಗಳನ್ನು ನೆಟ್ಟು ವನಸಿರಿ ಪೌಂಡೇಷನ್ ಕಾರ್ಯಕ್ಕೆ ಕೈ ಜೋಡಿಸಿದರು. ಇದರ ಮೂಲಕ ಪರಿಸರ ಉಳಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ ಕೂಡಾ ಅಚ್ಚರಿಯಾಗಿ ಉಳಿಯಲಿ ಎಂಬುದು ಪಿ ಎಂ ವಿಶ್ವಕರ್ಮ ತರಬೇತಿದಾರರ ಆಶಯವಾಗಿದೆ.
ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ,ವನಸಿರಿ ಫೌಂಡೇಷನ್
ಮಸ್ಕಿ ತಾಲೂಕ ಅಧ್ಯಕ್ಷ ರಾಜು ಪತ್ತಾರ ಬಳಗಾನೂರು, ರಾಯಚೂರು ವನಸಿರಿ ಪೌಂಡೇಷನ್ ಉಪಾಧ್ಯಕ್ಷರಾದ ದುರ್ಗೆಶ (DSP) ಹಾಗೂ ಟ್ರೈನರಗಳು,ಸಿಂಧನೂರು ಹಾಗೂ ವಿವಿಧ ತಾಲೂಕುಗಳ ತರಬೇತಿದಾರರು ಇದ್ದರು.
