ಬದುಕಿಗೆ ಬೇಕೆ ಬೇಕು ಸಹನೆ
ಅದರಿಂದಾಗಿಯೇ ನಿನ್ನ ಸಾಧನೆ
ತಾಳ್ಮೆಯೆಂಬ ಶ್ರೇಷ್ಠ ಸದ್ಗುಣ
ನಮ್ಮೆಲ್ಲರ ಯಶಸ್ಸಿಗೆ ಕಾರಣ..!
ಬದುಕಿನ ದಾರಿಯ ಗೆಲುವಿಗೆ
ಮುಖದಲ್ಲಿರಲಿ ಪ್ರೀತಿಯ ಕಿರುನಗೆ
ಇರಬೇಕು ಶ್ರಮದ ಸ್ವಪ್ರಯತ್ನ
ನೀನಾಗುವೆಯೋ ಆಗ ಭಾರತರತ್ನ..!!
ದುಡುಕುವ ನಿನ್ನ ಅವಲಕ್ಷಣ
ದುಷ್ಪರಿಣಾಮಗಳಿಗಾದೀತು ಕಾರಣ
ಆಗಬೇಕೆಂದರೆ ನೆಮ್ಮದಿಯ ಮನೆ
ಬೇಕು ಅತ್ಯಮೂಲ್ಯವಾದ ಈ ಸಹನೆ..!!!
-ಶ್ರೀನಿವಾಸ.ಎನ್.ದೇಸಾಯಿ, ಶಿಕ್ಷಕರು.
ಸ.ಮಾ.ಹಿ.ಪ್ರಾ ಶಾಲೆ ವಿದ್ಯಾನಗರ ಕುಷ್ಟಗಿ
