ಮನಸುಗಳು ಎರಡು ಸ್ವಚ್ಚಂದ ಬೆರೆತು
ಒಳ ಭಾವನೆಯ ಸೂಕ್ಷ್ಮತೆಯ ಅರಿತು
ಪ್ರೀತಿ ಪ್ರೇಮ ವೇದನೆಗೆ ಮನಸೋತು
ಅಣಿಯಾಗುವುದೇ ದಾಂಪತ್ಯ ಜೀವನ.
ಕೊಟ್ಟು ತೆಗೆದು ಪ್ರೀತಿಯ ಭಾವನೆ
ಇಟ್ಟು ನಡೆದು ಸಂಬಂಧದ ಸಹನೆ
ಇಬ್ಬರೂ ಅರಿತು ಒಳಗಿನ ವೇದನೆ
ಸಾಗುವುದೇ ಗಟ್ಟಿ ದಾಂಪತ್ಯ ಜೀವನ.
ನೋವು ನಲಿವುಗಳ ಹಂಚಿ ಸಾಗುತ
ಸುಖ ದುಃಖಗಳನ್ನು ಮೆಟ್ಟಿ ನಿಲ್ಲುತ
ಸರಸ ಸಲ್ಲಾಪದ ಸಿಹಿಯ ಸವಿಯುತ
ಸಾಗುವುದೇ ಗಟ್ಟಿ ದಾಂಪತ್ಯ ಜೀವನ.
ಕೋಪ ತಾಪಗಳ ಅತಿರೇಕಕ್ಕೆ ಬಿಡದೆ
ಅನುಮಾನ ಎದ್ದು ವಿರಸ ಮೂಡದೆ
ಗುಡಿಸಲೇ ಆದರೂ ನೆಮ್ಮದಿ ಕೆಡದೆ
ಹೆಜ್ಜೆ ಹಾಕುವುದೆ ದಾಂಪತ್ಯ ಜೀವನ.
ಒಬ್ಬರ ಮಾತಿಗೆ ಸೋಲುತ ನಡೆದು
ಸಂಬಂಧದಿ ಅನುಬಂಧವ ಬೆಸೆದು
ಹೆತ್ತವರ ಆಣತಿಯನ್ನು ನಿತ್ಯ ಪಡೆದು
ಸಾಗುವುದೇ ಗಟ್ಟಿ ದಾಂಪತ್ಯ ಜೀವನ.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.
