ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹೂಲಗೇರಿ ಗ್ರಾಮದಲ್ಲಿ ಕುಷ್ಟಗಿ ತಾಲೂಕಿನ ೧೩ ನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಯ ಹಿನ್ನೆಲೆಯಲ್ಲಿ ಪೂರ್ವ ಬಾವಿಸಭೆಯನ್ನು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹೂಲಗೇರಿ ಗ್ರಾಮದ ಗುರು ಹಿರಿಯರ ನೇತೃತ್ವದಲ್ಲಿ ತಾಲೂಕು ಕ.ಸಾ.ಪ.ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಗ್ರಾಮದ ಹಿರಿಯರಾದ ಸುರೇಶ ಎಲ್ ಕುಂಟನಗೌಡರು, ಮಾಜಿ ಜಿ.ಪ.ಸದಸ್ಯ ಪ್ರಕಾಶ ರಾಠೋಡ, ಮಾತನಾಡಿ ನಮ್ಮ ಗ್ರಾಮದಲ್ಲಿ ಸಮ್ಮೇಳನ ಆಯೋಜಿಸುವ ಬಗ್ಗೆ ಸಂತಸ ವ್ಯಕ್ತಪಡಿಸಿ ಸಮ್ಮೇಳನದ ಯಶಸ್ವಿಗೆ ತನು ಮನ ಧನ ರೂಪದಲ್ಲಿ ಸಹಕಾರ ನೀಡುತ್ತೇವೆ ಎಂದು ನುಡಿದರು.
ಸಮ್ಮೇಳನದ ಉದ್ದೇಶ ಮತ್ತು ಸಮ್ಮೇಳನದ ರೂಪ ರೇಷೆ ಕುರಿತು ನಿಕಟ ಪೂರ್ವ ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರವಿಂದ್ರ ಬಾಕಳೆ ಮಾತನಾಡಿ ನಿಮ್ಮ ಊರಿನಲ್ಲಿ ಸಮ್ಮೇಳನ ನಡೆಯುವುದು ಐತಿಹಾಸಿಕವಾಗಿ ದಾಖಲಾರ್ಹವಾಗುವಲ್ಲಿ ಎರಡು ಮಾತಿಲ್ಲ, ಬಂದಂತಹ ಅತಿಥಿಗಳಿಗೆ ಊಟೋಪಹಾರ ವ್ಯವಸ್ಥೆ ಸೇರಿದಂತೆ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.
ಕೇಂದ್ರ ಕ.ಸಾ.ಪ ಪ್ರತಿನಿಧಿ ನಬೀಸಾಬ ಕುಷ್ಟಗಿ ಮಾತನಾಡಿ ಕನ್ನಡ ಸಾಹಿತ್ಯ ಸಮ್ಮೇಳನ ನಾಡು,ನುಡಿ,ನೆಲ ಜಲದ ಕುರಿತು ಹಲವಾರು ಗೋಷ್ಟಿ ಏರ್ಪಡಿಸುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಬೇಕಾಗಿದೆ ಎಂದು ಹೇಳಿದರು.
ಮಾಜಿ ತಾ.ಪ.ಸದಸ್ಯ ಶೇಖರ ಹೊರಪ್ಯಾಟಿ ಮಾತನಾಡಿ ನಮ್ಮ ಹೂಲಗೇರಿ ಗ್ರಾಮವನ್ನು ಸಮ್ಮೇಳನ ಮಾಡಲು ಆಯ್ಕೆ ಮಾಡಿದ್ದಕ್ಕಾಗಿ ತಾಲೂಕು ಕ.ಸಾ.ಪ ಕ್ಕೆ ಧನ್ಯವಾದಗಳು ನಿಮ್ಮ ಆಶಯದಂತೆ ಸಮ್ಮೇಳನ ಮಾಡುತ್ತೇವೆ ಎಂದರು.
ಕ.ಸಾ.ಪ ತಾಲೂಕು ಅಧ್ಯಕ್ಷ ಲೆಂಕಪ್ಪ ವಾಲಿಕಾರ ಸ್ವಾಗತಿಸಿ ಸಮ್ಮೇಳನದ ಯಶಸ್ವಿಗೆ ಕರೆ ನೀಡಿದರು.
ಕೋಶಾಧ್ಯಕ್ಷ ಅಬ್ದುಲ್ ಕರಿಂ ಒಂಟೇಳಿ ಸಮ್ಮೇಳನದ ಖರ್ಚು ವೆಚ್ಚದ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಕವಿತಾ ರವಿ ಚವ್ವಾಣ, ಉಪಾಧ್ಯಕ್ಷ ಶಾಂತವ್ವ ಶಂಕ್ರಗೌಡಾ, ಸೇರಿದಂತೆ ಸದಸ್ಯರಾದ ಲಕ್ಷ್ಮೀಬಾಯಿ ಚೌರದ,ವಿಜಯಲಕ್ಷ್ಮಿ ಶಂಕರ, ದಾಧೀಭಿ ಶ್ಯಾಮೀದಸಾಬ,ಮೈಬೂಬ ಹುಸೇನ್ ಉಂಡಿ, ಚಂದ್ರುಗೌಡಾ, ಯಂಕಪ್ಪ ತಳವಾರ,ಚಂದಪ್ಪ ಮಲ್ಲಪ್ಪ, ಶೋಬಾರಾಠೋಡ,ವೀರುಪಾಕ್ಷಗೌಡ ಹಾಲಬಾವಿ,ಚಂದ್ರಶೇಖರ, ಶರಣಪ್ಪ ಸೇರಿದಂತೆ ಮಂಜುನಾಥ ಗುಳೇದಗುಡ್ಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಹೂಲಗೇರಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ ತಿಂಗಳ ಕೊನೆಯ ವಾರದಲ್ಲಿ ಮಾಡುವುದಾಗಿ ನಿರ್ಣಯ ಮಾಡಿದರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ದೊಡ್ಡನಗೌಡ ಪಾಟೀಲ್ ಅವರ ಗಮನಕ್ಕೆ ತಂದು ದಿನಾಂಕ ನಿಗದಿಗೊಳಿಸಲು ಪದಾಧಿಕಾರಿಗಳು ತೀರ್ಮಾನಕ್ಕೆ ಬಂದರು.
