ಧ್ವೇಷ ಅಸೂಯೆಗಳ ಸುಟ್ಟು
ಸ್ವಾರ್ಥ , ಅನ್ಯಾಯಗಳ ಬಿಟ್ಟು
ಪ್ರೀತಿ, ವಿಶ್ವಾಸಗಳ ಸದಾ ನೆಟ್ಟು
ಗುರಿ ಸಾಧನೆಗೆಳ ಫಣವ ತೊಟ್ಟು
ಸ್ವಾಗತಿಸೋಣ ನೂತನ ವರ್ಷವನ್ನು.
ಹಳೆಯ ಕಹಿಗಳ ಮರೆತು
ಸ್ನೇಹ ಬಾಂಧವ್ಯದಿ ಬೆರೆತು
ಸದ್ಗುಣಗಳ ಪಾಠವ ಕಲಿತು
ನಾಡಿನ ಏಳ್ಗೆಯನ್ನು ಕುರಿತು
ಸ್ವಾಗತಿಸೋಣ ನೂತನ ವರ್ಷವನ್ನು.
ಶುದ್ಧ ಮನದಿ ಎಲ್ಲರೊಡನೆ ಕೂಡಿ
ಸ್ನೇಹದಿ ಬಾಳುವ ಸಂಕಲ್ಪ ಮಾಡಿ
ಭಾಂದವ್ಯದ ಸವಿನುಡಿಗಳನು ಆಡಿ
ಬರೆಯುತ ಸಾಮರಸ್ಯಕ್ಕೆ ಮುನ್ನುಡಿ
ಸ್ವಾಗತಿಸೋಣ ನೂತನ ವರ್ಷವನ್ನು.
ಕಡು ಕಷ್ಟಗಳೆಂದೂ ಬಾರದಿರಲೆಂದು
ರೋಗ ರುಜಿನಗಳು ಹರಡದಿರಲೆಂದು
ವರ್ಷವಿಡೀ ಹರುಷವು ತುಂಬಿರಲೆಂದು
ಭಗವಂತನ ಅಭಯ ಸದಾ ಇರಲೆಂದು
ಬಯಸಿ ಸ್ವಾಗತಿಸೋಣ ನೂತನ ವರ್ಷವನ್ನು.

✍️ ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು,ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ -9740199896.
