ಸಮಯ ಬದಲಾಯಿತೇ
ವ್ಯಕ್ತಿತ್ವ ಬದಲಾಯಿತೇ
ಬದುಕು ಬದಲಾಯಿತೇ
ಬದಲಾಗದಿರುವುದು ನೆನಪು ಮಾತ್ರ
ಕೆಲವರು ಬಂದು ತಿಳಿಯದೆ ಹೋದರು
ಕೆಲವರು ತಿಳಿದು ಅರಿಯದೆ ಹೋದರು
ಕೆಲವರು ಜೀವನವನ್ನೇ ತ್ಯಜಿಸಿ ಹೋದರು
ಆದರೂ ಮನಸ್ಸಿನಲ್ಲಿ ನೆನಪುಗಳ ಹಾಗೆ ಉಳಿದುಬಿಟ್ಟರು
ಆ ಮಧುರ ಕ್ಷಣಗಳೆಲ್ಲ ಮರಳಿ ಬರುವುದಿಲ್ಲ
ತೊರೆದು ಹೋದವರೆಲ್ಲ ಹಿಂತಿರುಗುವುದಿಲ್ಲ
ಲೋಕವನ್ನೇ ತ್ಯಜಿಸಿದವರು ಬರುವ ಭ್ರಮೆ ಇಲ್ಲ
ಆದರೆ ನೆನಪಾದಾಗೆಲ್ಲ ಕಣ್ಣಂಚಲಿ ನೀರಾಗಿ ಬರುವರೆಲ್ಲ
ರಚನೆ : ಅನುರಾಧ ಡಿ. ಸನ್ನಿ
ಹೂಲಗೇರಿ
