ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ನಿತ್ಯವಾದ ಬದುಕಲ್ಲಿ
ಕನ್ನಡವೇ ಮುಖ್ಯ
ಕಲಿಸೋಕೆ ಸಾವಿರ ಭಾಷೆ
ಕಲಿಯೋಕೆ ಒಂದೇ ಭಾಷೆ
ಅದೇ ನಮ್ಮ ಮಾತೃಭಾಷೆ ಕನ್ನಡ ಕನ್ನಡ ನಮ್ಮ ಕನ್ನಡ
ಕನ್ನಡಕ್ಕಾಗಿ ಕೈಯೆತ್ತಿರುವೆ
ಕನ್ನಡ ಭಾಷೆಗೆ ಉಸಿರಾಗಿರುವೆ
ಕನ್ನಡವೇ ನಮ್ಮ ಜೀವಾಳ
ಜೀವ ಗಂಗೆ ಜೀವಾಮೃತವೇ ತಾಯ್ನಾಡು
ರಚನೆ : ಅನುರಾಧ ಡಿ. ಸನ್ನಿ, ಹೂಲಗೇರಿ
