
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದ ಸರಕಾರಿ ಶಾಲೆಯ ಆವಣರದಲ್ಲಿ ಹಾಕಿರುವ ಗಿಡಗಳಿಗೆ ಬಣ್ಣ ಹಚ್ಚುವ ಮೂಲಕ ಹೊಸ ವರ್ಷಾಚರಣೆಯನ್ನು ಡಣಾಪುರ ಶಾಲೆಯ ಹಳೆ ವಿದ್ಯಾರ್ಥಿಗಳ ತಂಡ ವಿಶೇಷವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ಸುಮಾರು 25 ರಿಂದ 30 ಗಿಡಗಳಿಗೆ ಸುಣ್ಣ ಬಣ್ಣ ಹಚ್ಚಲಾಗಿದೆ, ಈ ಬಣ್ಣ ಹಚ್ಚುವುದರಿಂದ ಗಿಡಮರಗಳಿಗೆ ಇರುವೆ , ಕೆಲ ಮರಗುಟುಕಗಳ ಕಾಟ ಬರುವುದಿಲ್ಲ ಗಿಡಗಳ ಬುಡಕ್ಕೆ ಬಣ್ಣ ಹಚ್ಚುವುದರಿಂದ ಕೀಟನಾಶಕದಂತೆ ಗಿಡಗಳ ಸಂರಕ್ಷಣೆ ಆಗುತ್ತದೆ. ಕಳೆದ ವರ್ಷಾನೂ ಹೀಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಕಿರುವ ಗಿಡಮರಗಳಿಗೆ ಹಚ್ಚಲಾಗಿತ್ತು.
ಪರಿಸರ ನಾಶ ಮಾಡದೆ , ದುಂದು ವೆಚ್ಚ ಮಾಡದೆ ಪರಿಸರ ರಕ್ಷಣೆ ಮಾಡುವ ಮೂಲಕ ಜನ ಮೆಚ್ಚುವಂತ ಹೊಸವರ್ಷ ಆಚರಣೆ ಮಾಡೋಣ ಎಂಬುದು ಇವರ ಆಶಯವಾಗಿದೆ.
ಬಣ್ಣ ಹಚ್ಚುವಾಗ ಕಂಡು ಬಂದ ವಾತಾವರಣ
ಸರಕಾರಿ ಶಾಲೆಯ ಆವರಣ ಬಹಳ ಹದೆಗಟ್ಟಿದ್ದು ಹಾಗೂ ಪುಂಡ ಪೋಕರಿಗಳಿಗೆ ಸದ್ಯ ತಾಣವಾಗಿ ಮಾರ್ಪಟ್ಟಿದೆ .
ಎಲ್ಲೆಂದರಲ್ಲಿ ಗುಟಕಾ , ಸಿಗರೇಟ್ ಪ್ಯಾಕೆಟ್ ಹಾಗೂ ಮಧ್ಯ ಬಾಟಲಿಗಳು , ಶಾಲೆಯ ಮುಖ್ಯ ಗೇಟ್ ಗೆ ಮಲ ಮೂತ್ರ ವಾಸನೆ ಈಗೆ ಶಾಲೆಯ ಪರಿಸರದ ಸ್ಥಿತಿ ವಾಸನೆ ಯುಕ್ತವಾಗಿದೆ ಸರಕಾರಿ ಶಾಲೆಯ ಕಾಳಜಿ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಅಲ್ಲಿನ ಶಾಲೆಯ ಆಡಳಿತ ಮಂಡಳಿ ಎಚ್ಚೆತ್ತುಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ ಎನ್ನುತ್ತಾರೆ ಹಳೆ ವಿದ್ಯಾರ್ಥಿಗಳಾದ , ರಾಘವೇಂದ್ರ ಆರ್, ಬಸವರಾಜ , ಶರಣಪ್ಪ ,ಹನುಮೇಶ ಬಿ, ಗೂಡಪಾಶ , ಜಗದೀಶ , ಶಿವುಕುಮಾರ ,ಹನುಮೇಶ ,ಇಮ್ರಾನ್.




















