ಕೊಪ್ಪಳ/ ಯಲಬುರ್ಗಾ : ಪಟ್ಟಣದಲ್ಲಿ ನೂತನ ಸರಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜ ಪ್ರಾರಂಭಿಸುವಂತೆ ವೈದ್ಯಕೀಯ ಸಚಿವರಿಗೆ ಶಾಸಕ ಬಸವರಾಜ ರಾಯರೆಡ್ಡಿ ಪತ್ರ ಬರೆದ ಹಿನ್ನೆಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷ ಕಾಲೇಜ ಪ್ರಾರಂಭಕ್ಕೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ಸಮಿತಿಯನ್ನು ರಚಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಆರ್ಥಿಕವಾಗಿ, ಶೈಕ್ಷಣಿಕವಾಗಿ, ಹಿಂದುಳಿದಿರುವ ಯಲಬುರ್ಗಾ ತಾಲೂಕು ಡಾ.ನಂಜುಂಡಪ್ಪ ವರದಿಯ ಪ್ರದೇಶವಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕ್ಕೆ ಆರೋಗ್ಯ ಕ್ಷೇತ್ರದಲ್ಲಿ ನರ್ಸಿಂಗ್ ಕಾಲೇಜು ಅತ್ಯಂತ ಅವಶ್ಯಕ ಅಪೌಷ್ಟಿಕತೆ ಬಹಳಷ್ಟು ಇದ್ದು ಬಾಣಂತಿಯರ, ಶಿಶು ಮರಣ ಹೆಚ್ಚಾಗಿರುತ್ತದೆ. ಹೀಗಾಗಿ ನಗರದಲ್ಲಿ ನರ್ಸಿಂಗ್ ಕಾಲೇಜು ಇರುವುದಿಲ್ಲ ಈ ಕಾಲೇಜು ಪ್ರಾರಂಭಿಸಿದರೆ ಅನುಕೂಲವಾಗುತ್ತದೆ.
ಸರ್ಕಾರದ ಸೂಚನೆ ಆರೋಗ್ಯ ಇಲಾಖೆಯಿಂದ ಸಮಿತಿ ರಚಿಸಿದ್ದು ಕೊಪ್ಪಳದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ವೈಜನಾಥ ಇಟಗಿ,ಜಿಲ್ಲಾ ಡಿಎಚ್ಒ,ಟಿ. ಲಿಂಗರಾಜ, ಬೆಂಗಳೂರಿನ ಕೆ ಎಸ್ ಡಿಎ ಹೆಚ್ ಬಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಳ್ಳಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನೋಡಲ್ ಅಧಿಕಾರಿ ಶ್ರೀಕಾಂತ್ ಪುಲಾರಿ, ಅವರ ನೇತೃತ್ವದ ನಾಲ್ಕು ಜನರ ಸಮಿತಿ ರಚನೆ ಮಾಡಿದ್ದು, ಶೀಘ್ರದಲ್ಲಿಯೇ ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸರಕಾರಕ್ಕೆ ವರದಿ ಸಲ್ಲಿಸಲಿದ್ದರೆ. ಹೀಗಾಗಿ ಕಾಲೇಜು ಪ್ರಾರಂಭಕ್ಕೆ ಸರ್ಕಾರದಿಂದ ಪ್ರಸ್ತಾವನೆ ಸಲ್ಲಿಕೆಯಾಗಲಿದ್ದು ಸಿಎಂ ಆರ್ಥಿಕ ಸಲಹೆಗಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಈಗಾಗಲೇ ಸಂಬಂಧಿಸಿದ ಇಲಾಖೆ ಮಂತ್ರಿಗಳು ಹಾಗೂ ಇಲಾಖೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರಿಂದ ಸಮಿತಿ ರಚನೆಗೊಂಡಿದೆ.


ಕಾಲೇಜು ಕಟ್ಟಡಕ್ಕೆ ಬೇಕಾದ ಸಂಪೂರ್ಣ ಅನುದಾನವನ್ನು 2025-26ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿ ಸುಮಾರು 6ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಈ ನರ್ಸಿಂಗ್ ಕಾಲೇಜಿಗೆ ಬೇಕಾಗಿರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳಿಗೆ ಮುಂದಿನ ಮೂರು ವರ್ಷಗಳ ವೇತನವನ್ನು ಕೂಡಾ ತಾಲೂಕಿಗೆ ಮಂಜೂರಾಗುವ 2025-26ನೇ ಸಾಲಿನ ಕೆಕೆಆರ್‌ಡಿಬಿ ಅನುದಾನದಲ್ಲಿ ನೀಡಲಾಗುವುದು. ಹೀಗಾಗಿ ಈ ಕಾಲೇಜ ಪ್ರಾರಂಭಿಸಲು ಪಟ್ಟಣದ ನೂರು ಹಾಸಿಗೆಯ ಆಸ್ಪತ್ರೆ ಯೋಗ್ಯವಾಗಿದೆ.

ಯಲಬುರ್ಗಾ ಪಟ್ಟಣಕ್ಕೆ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜನ್ನು ಮಂಜೂರು ಮಾಡುವಂತೆ ಕ್ಷೇತ್ರದ ಶಾಸಕ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಸಂತೋಷದ ವಿಷಯ ಈ ಭಾಗದಲ್ಲಿ ಸರಕಾರಿ ನರ್ಸಿಂಗ್ ಕಾಲೇಜ್ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಈ ನಿಟ್ಟಿನಲ್ಲಿ ಪಟ್ಟಣಕ್ಕೆ ಸರಕಾರಿ ನರ್ಸಿಂಗ್ ಕಾಲೇಜ್ ಮಂಜೂರು ಮಾಡುವಂತೆ ಸರಕಾರಕ್ಕೆ ಮನವಿ ಮಾಡಿದ್ದು ಸ್ವಾಗತಾರ್ಹ.
-ಡಾ.ಶಿವನಗೌಡ ದಾನರೆಡ್ಡಿ
ಉಪಾಧ್ಯಕ್ಷ,ಆರೋಗ್ಯ ರಕ್ಷಾ ಸಮಿತಿ,
100 ಹಾಸಿಗೆಗಳ ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಲಬುರ್ಗಾ.
” ಕುಕನೂರ ಆಸ್ಪತ್ರೆಗೂ ಹಣ ಬಿಡುಗಡೆ “
ಕುಕನೂರು ಪಟ್ಟಣದ 30 ಹಾಸಿಗೆ ಆಸ್ಪತ್ರೆಯನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಿ ಸರಕಾರ ಆದೇಶಿಸಿದೆ. ಅವರ ನೂತನ ಕಟ್ಟಡ ನಿರ್ಮಾಣಕ್ಕೂ 42 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ.
ಯಲಬುರ್ಗಾ ಕ್ಷೇತ್ರ ವೈದ್ಯಕೀಯ ಕ್ಷೇತ್ರದಲ್ಲಿ ಹಿಂದುಳಿದಿದ್ದು ಇಂತಹ ಸರ್ಕಾರಿ ಕಾಲೇಜುಗಳನ್ನು ಪ್ರಾರಂಭಿಸಿ ಮುಂದಿನ ಸಾಲಿಗೆ ಕಾಲೇಜು ಪ್ರಾರಂಭಿಸಬೇಕೆಂದು ಸಚಿವರಿಗೆ ರಾಯರೆಡ್ಡಿ ಪತ್ರ ಬರೆದಿದ್ದಾರೆ.
ವರದಿ : ಬಸವರಾಜ ಕೆ ಕಳಸಪ್ಪನವರ, ಯಲಬುರ್ಗಾ
