ಸಂಬಂಧಗಳ ಕೊಂಡಿಯ ಕಳಚಿಟ್ಟು
ಮಾನವೀಯ ಮೌಲ್ಯಗಳ ಬದಿಗಿಟ್ಟು
ಆಡಂಬರದ ಜೀವನವನ್ನು ತಲೆಗಿಟ್ಟು
ಸಾಗಿಹರು ಹಣಕ್ಕೆ ಪ್ರಾಧಾನ್ಯತೆ ಕೊಟ್ಟು.
ಬೆಳೆದು ಬಂದ ದಾರಿಯನೆಲ್ಲಾ ಮರೆತು
ನಿಂತಲ್ಲೇ ಬಿಟ್ಟು ಹೋಗಿ ಕೊಟ್ಟ ಮಾತು
ಆಸೆ, ಆಕಾಂಕ್ಷೆಗಳಿಗೆ ಮನವ ಸೋತು
ಸಾಗಿಹರು ಕಾಸಿದ್ರೆ ಕೈಲಾಸ ಎಂದರಿತು.
ನಿರ್ಗತಿಕರ ಮೇಲೆ ತೋರುತ ರುದ್ರಪ್ರತಾಪ
ಸುಖಾ ಸುಮ್ಮನೆ ಅಂಟಿಸಿ ದೋಷಾರೋಪ
ಕಾಲಹರಣದಿ ಮಾಡುತ ವ್ಯರ್ಥದ ಕಲಾಪ
ನಿತ್ಯವೂ ಮಾಡಿಹರಿಲ್ಲಿ ಸ್ವಾರ್ಥಕ್ಕಾಗಿ ಜಪ.
ಎಲ್ಲೆ ಮೀರಿ ಸರ್ವವೂ ಉಳ್ಳವರ ತಾಕತ್ತು
ಬಡವರ ನೋವಿಗೆ ಬೆಲೆಯಿಲ್ಲ ಕಿಂಚಿತ್ತೂ
ನ್ಯಾಯ ನೀತಿಯ ಮರೆತಿರುವ ಈ ಜಗತ್ತು
ಪಡೆದ ಸಹಾಯಕ್ಕೆ ತೋರದಾಗಿದೆ ನಿಯತ್ತು.
-ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
