ಕೊಪ್ಪಳ/ಯಲಬುರ್ಗಾ: ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣದ ಜಿಲ್ಲೆಯ ವಿವಿಧ ತಾಲೂಕುಗಳ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಪತ್ರಗಳನ್ನು ನೀಡಲಾಗಿದೆ, ತಾವುಗಳು ಗುರುತರವಾದ ಜವಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ಎಲ್ಲಾ ರೀತಿಯ ಶಿಸ್ತುಬದ್ಧ ಸಿದ್ಧಾಂತಗಳಿಗೆ ಗೌರವ ನೀಡುತ್ತಾ ಕಾರ್ಯೋನ್ಮುಖರಾಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣ ರಾಜ್ಯ ಯುವ ಘಟಕದ ಅಧ್ಯಕ್ಷ ಶಶಿಧರ ನಾಯಕ ಹೇಳಿದರು.
ತಾಲೂಕಿನ ಹಿರೇವಂಕಲಕುಂಟಾ ಪ್ರವಾಸಿ ಮಂದಿರದಲ್ಲಿ ದಿ. 12-01-2025 ರ ರವಿವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವತಂತ್ರ ಬಣದ ಸಭೆ ಉದ್ದೇಶಿಸಿ ಮಾತನಾಡಿ ಸಂಘಟನೆಯನ್ನು ಬಲಗೊಳಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅತ್ಯಂತ ಪರಿಣಾಮಕಾರಿಯಾಗಿ ನಾಡು ನುಡಿ ನೆಲ ಜಲ ರಕ್ಷಣೆಗಾಗಿ ಸಂಘಟನೆ ಮಾಡಲು ಮುಂದಾಗಬೇಕು ಎಂದರು.
ಸಂಘಟನೆಯ ಜಿಲ್ಲಾಧ್ಯಕ್ಷ ಭೀಮನಗೌಡ ಮಾಲಿ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೌನೇಶ ಎಚ್ ಮದ್ಲೂರು ,ಜಿಲ್ಲಾ ಸಹ ಕಾರ್ಯದರ್ಶಿ ಮೇಘರಾಜ ಕಮ್ಮಾರ ,ಗಂಗಾವತಿ ತಾಲೂಕ ಅಧ್ಯಕ್ಷ ಎಚ್.ಮಲ್ಲೇಶ್ವರ, ಕಾರಟಗಿ ತಾಲೂಕ ಅಧ್ಯಕ್ಷ ಯಮನೂರಪ್ಪ ಮಡಿವಾಳರ, ಕುಷ್ಟಗಿ ತಾಲೂಕ ಅಧ್ಯಕ್ಷ ಶರಣಗೌಡ ಮಾಲಿ ಪಾಟೀಲ್, ಕನಕಗಿರಿ ತಾಲೂಕ ಅಧ್ಯಕ್ಷರಾಗಿ ಹನುಮಂತಪ್ಪ ನಾಯಕ, ಯಲಬುರ್ಗಾ ತಾಲೂಕ ಅಧ್ಯಕ್ಷರಾಗಿ ಶಂಕ್ರಪ್ಪ ಶಾಖಾಪೂರ, ಯಲಬುರ್ಗಾ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಕುಲಕರ್ಣಿ, ಯುವ ಘಟಕದ ಗೌರವಾಧ್ಯಕ್ಷರಾಗಿ ಹೆಚ್ .ವಾಯ್. ಹೊಂಬಳ, ಸದಸ್ಯರುಗಳಾಗಿ ದೇವೇಂದ್ರ ಈಳಿಗೇರ ,ಯಲ್ಲಪ್ಪ ತಳವಾರ ರವರನ್ನು ಆಯ್ಕೆ ಮಾಡಿದ ನಂತರ ಕನ್ನಡ ಶಾಲು ಹೊದಿಸಿ ಆದೇಶ ಪತ್ರ ನೀಡಿ ಅಭಿನಂದಿಸಲಾಯಿತು .
