ಕೊಪ್ಪಳ/ಗಂಗಾವತಿ:
ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಗಂಗಾವತಿಯಿಂದ ಪ್ರಯಾಣಿಸಿದ ಕೆ ಎಸ್ ರಾಜು ಹಾಗೂ ತಂಡಕ್ಕೆ ಸಾಂಕೇತಿಕವಾಗಿ ಕಡ್ಲೆಹಿಟ್ಟಿನ ಪಾಕೆಟ್ ವಿತರಿಸಿ, ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಾಗೂ ನದಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಈ ವೇಳೆ 90.4FM ಗ್ರಾಮೀಣ ಭಾರತಿ ರೇಡಿಯೋದ ರಾಘವೇಂದ್ರ ತೂನ, ಅಭಿಯಾನದ ಸ್ವಯಂ ಸೇವಕರಾದ ರಾಘವೇಂದ್ರ ರಾಠೋಡ , ಹನುಮೇಶ್ ಭಾವಿಕಟ್ಟಿ ಇದ್ದರು.
