ಹಾಸ್ಟೆಲ್ ಹಾಗೂ ವಸತಿ ಶಾಲೆ-ಕಾಲೇಜುಗಳ ಹೊರಗುತ್ತಿಗೆ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವಂತೆ ಕೊಪ್ಪಳ ಜಿಲ್ಲಾಡಳಿತ ಕಛೇರಿ ಮುಂದೆ ಅನಿರ್ಧಿಷ್ಟ ಹಗಲು-ರಾತ್ರಿ ಧರಣಿ ಸತ್ಯಾಗ್ರಹ.
ಕೊಪ್ಪಳ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮೊರಾರ್ಜಿ ಶಾಲೆಗಳಲ್ಲಿ ಕಳೆದ 15-20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರಿಗೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ಖಾಯಂ ನೌಕರರ ವರ್ಗಾವಣೆಯಿಂದ ಹೊರ ಗುತ್ತಿಗೆ ನೌಕರರು ಕೆಲಸ ಕಳೆದುಕೊಳ್ಳುತ್ತಾರೆ. ಕಡಿಮೆ ಸಂಬಳಕ್ಕೆ ವಸತಿ ನಿಲಯ, ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಛತಾಗಾರರು, ಕಾವಲುಗಾರರು, ಡಿ ಗ್ರೂಪ್, ಪ್ರಥಮ ದರ್ಜೆ ಸಹಾಯಕರು, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್ಗಳು, ಹೊರಗುತ್ತಿಗೆ ಶಿಕ್ಷಣ ದಿನಗೂಲಿ ನೌಕರರು ಯಾವುದೇ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುತ್ತಾರೆ. ಗುತ್ತಿಗೆದಾರರಾದ ವಾರ್ಡನ್‌ರವರು, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹೊರಗುತ್ತಿಗೆ ಸಿಬ್ಬಂದಿಗಳನ್ನು ಶೋಷಣೆ ಮಾಡುತ್ತಿದ್ದಾರೆ ಈ ನೌಕರರು ತೀರಾ ಕಡಿಮೆ ಸಂಬಳ 500 ರೂಪಾಯಿಗಳಿಂದ ಕಡಿಮೆ ಸಂಬಳದಲ್ಲಿ ದುಡಿಯುತ್ತಾ ಬಂದಿರುತ್ತಾರೆ. 14-15 ತಾಸುಗಳ ಕೆಲಸ ಮಾಡಿದರೂ ಯಾರಿಗೂ ಕರುಣೆ ಬರುತ್ತಿಲ್ಲ. ವೇತನವೂ ಸರಿಯಾಗಿ ತಿಂಗಳ ತಿಂಗಳ ಬರುತ್ತಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊಸದಾಗಿ ಹಾಸ್ಟೆಲ್ ಪ್ರಾರಂಭವಾಗಿದ್ದು 8-10 ವರ್ಷ ಕೆಲಸ ಮಾಡಿ ಖಾಯಂ ನೌಕರು ಬಂದಾಗ ಕೆಲಸ ಕಳೆದುಕೊಂಡ ಜಿಲ್ಲೆಯ ಸಿಬ್ಬಂದಿಗಳನ್ನು ಬಿಸಿಎಂ ಇಲಾಖೆ ಬೀದಿ ಪಾಲು ಮಾಡಿದ್ದಾರೆ. ಹೆಚ್ಚುವರಿ ಸಿಬ್ಬಂದಿಗಳನ್ನು 18 ಜನ ಸಿಬ್ಬಂದಿಗಳನ್ನು ಕೆಲಸಕ್ಕೆ ಸೇರಿಸಕೊಳ್ಳಬೇಕು ಹಾಗೂ ನಾಲ್ಕು ವರ್ಷಗಳಿಂದ ವೇತನವೂ ಹೆಚ್ಚಳವಾಗಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ, ವೇತನ ಕಡಿಮೆಯಿಂದ ಕುಟುಂಬ ನಡೆಸಲು ಸಾಧ್ಯವಾಗುತ್ತಿಲ್ಲ. ಅತ್ಯಂತ ಸಂಕಷ್ಟದಲ್ಲಿ ಹೊರಗುತ್ತಿಗೆ ನೌಕರರು ಒದ್ದಾಡುತ್ತಿದ್ದಾರೆ. ಹಾಗಾಗಿ ತಮ್ಮ ಕಛೇರಿಯ ಎದುರು ಅನಿರ್ಧಿಷ್ಟ ಹೋರಾಟ ಮಾಡಿ ಮನವಿ ಸಲ್ಲಿಸುತ್ತಿದ್ದು ಕೆಲ – ಸಮಸ್ಯೆಗಳನ್ನು ಪರಿಹಾರ ಮಾಡಲು ತಾವುಗಳು ಸಭೆ ಕರೆದು ಚರ್ಚಿಸಬೇಕೆಂದು ಈ ಅನಿರ್ಧಿಷ್ಟ ಧರಣಿಯ ಮೂಲ ಒತ್ತಾಯಿಸುತ್ತೇವೆ ಎಂದು ಧರಣಿ ನಿರತರು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.
1 . ತಿಂಗಳಿಗೆ ಕನಿಷ್ಠ ವೇತನ ಮಾಸಿಕ ರೂ.31 ಸಾವಿರ ಕೊಡಬೇಕು
2.ನಿವೃತ್ತಿವರೆಗೆ ಸೇವಾ ಭದ್ರತೆ ಕೊಡಬೇಕು.
3.ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು.
- ಖಾಸಗಿ ಎಜೆನ್ಸಿಗೆ ನೀಡಿದ ಟೆಂಡರ್ ರದ್ದು ಪಡಿಸಿಬೇಕು.
5 ಕಾರ್ಮಿಕ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ಕೊಡಬೇಕು. ಕೆಲಸದ ಸಮಯ ನಿಗದಿ ಆಗಬೇಕು
- ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ(ನಿ.) ವನ್ನು ಜಿಲ್ಲೆಯಲ್ಲಿ ರಚಿಸಲು ತುರ್ತಾಗಿ ಸಭೆ ಕರೆಯಬೇಕು.
- ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐ.ಡಿ.ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ESI ಹಣ ತುಂಬಿದ ರಶೀದಿ ಕೊಡಬೇಕು.
- ಹಿಂದುಳಿದ ವರ್ಗ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತ ಮಾಡಿದ ಆದೇಶ ರದ್ದಾಗಬೇಕು. 50 ವಿದ್ಯಾರ್ಥಿಗಳಿಗೆ 3 ಜನ ಸಿಬ್ಬಂದಿಯಂತೆ ಹಿಂದಿನ ಪದ್ಧತಿ ಮುಂದುವರಿಸಬೇಕು.
- 10 ವರ್ಷ ಸೇವೆ ಸಲ್ಲಿಸಿರುವ ಹೊರ ಗುತ್ತಿಗೆ ಸಿಬ್ಬಂದಿಗಳನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಂದ ಅಡಿಯಲ್ಲಿ ಎಲ್ಲರನ್ನೂ ತರಬೇಕು.
- ಬಿಸಿಎಂ ಇಲಾಖೆಯಲ್ಲಿ ಕೆಲಸ ಕಳೆದು ಕೊಂಡಿರುವ 18 ಜನ ಹೊರಗುತ್ತಿಗೆ ಸಿಬ್ಬಂದಿಗಳನ್ನು ಆಯುಕ್ತರ ಆದೇಶ ಮತ್ತೆ ಮರು ನೇಮಕ ಮಾಡಿಕೊಳ್ಳಬೇಕು. ಹೊಸದಾಗಿ ಪ್ರಾರಂಭ ಮಾಡುವ ಹಾಸ್ಟೆಲ್‌ಗಳಿಗೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.
- ವಸತಿ ನಿಲಯ ಮತ್ತು ಹಾಸ್ಟೆಲ್‌ಗಳಿಗೆ ವಾರ್ಡನ್ ರವರು ಮಕ್ಕಳ ಅಡುಗೆಗೆ ಅಗತ್ಯವಾಗಿ ಬೇಕಾದ ಗುಣಮಟ್ಟದ ಸಾಮಾಗ್ರಿಗಳನ್ನು ಸರಿಯಾದ ಪ್ರಮಾಣದಲ್ಲಿ ತಂದು ಕೊಡಬೇಕು.
12 ನಿವೃತ್ತಿ ನಂತರ ಜೀವನ ನಿರ್ವಹಣೆಗೆ 10 ಲಕ್ಷ ಪರಿಹಾರ ಕೊಡಬೇಕು.
ಈ ಮೇಲ್ಕಂಡ ಬೇಡಿಕೆಗಳನ್ನು ಚರ್ಚಿಸಲು ತಮ್ಮ ಅಧ್ಯಕ್ಷತೆಯಲ್ಲಿ ಇಲಾಖೆಯ ಅಧಿಕಾರಿಗಳು ಒಳಗೊಂಡ ಸಂಘದ ಮುಖಂಡರ ಸಭೆಯನ್ನು ಕರೆಯಬೇಕಾಗಿ ಒತ್ತಾಯ ಮಾಡುತ್ತೇವೆ.
ಜಿಲ್ಲಾಧ್ಯಕ್ಷರಾದ ಗ್ಯಾನೇಶ್ ಕಡಗದ,
ಪ್ರಮುಖರಾದ ಸುಂಕಪ್ಪ ಗದಗ,
ಖಾಸಿಂ ಸಾಬ್ ಸರ್ದಾರ್,
ರಫೀಕ್ ಜಗಿರ್ದಾರ್,
ಫಕೀರಪ್ಪ ,
ದೊಡ್ಡಬಸವರಾಜ,
ಪಾರ್ವತಿ.ಲೋಕೇಶ, ಹನುಮಂತ, ಭೀಮಣ್ಣ, ನಾಗರಾಜ, ಪಾರಮ್ಮ, ಶಾಂತಮ್ಮ ಲೋಕೇಶ್, ರಮೇಶ್ ಪಾರಮ್ಮ, ವೆಂಕಟೇಶ್, ದಸ್ತಗಿರಿ ಸೇರಿದಂತೆ ಇತರರು ಇದ್ದರು.
