ಕೊಪ್ಪಳ: ವಚನಕಾರ ಅಂಬಿಗರ ಚೌಡಯ್ಯನವರು ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಿದ್ದರು ಎಂದು ಪ್ರಾಚಾರ್ಯರಾದ ಡಾ. ಗಣಪತಿ ಲಮಾಣಿ ಯಾವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಮಂಗಳವಾರದಂದು ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ 12ನೇ ಶತಮಾನದಲ್ಲಿ ವಚನಕಾರ ಅಂಬಿಗರ ಚೌಡಯ್ಯ ನವರು ತಮ್ಮ ವಚನಗಳ ಮೂಲಕ ಸಮಾಜದ ತಪ್ಪುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ, ಸಮಾಜದಲ್ಲಿ ಎಲ್ಲರೂ ಸಮಾನರು ಎಂದು ಹೇಳಿದ್ದಾರೆ ಎಲ್ಲರಿಗೂ ಒಂದೇ ಎಂಬ ಭಾವನೆ ಇರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಡಾ. ನರಸಿಂಹ ಅವರು ಮಾತನಾಡಿ ಅಂಬಿಗರ ಚೌಡಯ್ಯ ನವರು 1160 ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನ ಶಿವಪುರದಲ್ಲಿ ಜನಿಸಿದರು ಇವರ ತಂದೆ ವಿರುಪಾಕ್ಷಿ, ತಾಯಿ ಪಂಪದೇವಿ, ಅಂಬಿಗರ ಚೌಡಯ್ಯ ನವರು ಮೂಲ ವೃತ್ತಿ ದೋಣಿ ನಡೆಸುವ ಕಾಯಕ ಮಾಡುತ್ತಿದ್ದರು. ಇವರು ತಮ್ಮ ವಚನಗಳ ಮೂಲಕ ಜಾತಿ, ಅಸಮಾನತೆಯನ್ನು ಖಂಡಿಸಿದ್ದಾರೆ. ಇವರು ಸುಮಾರು 279 ವಚನಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಅವರು ಮಾತನಾಡುತ್ತಾ ಅಂಬಿಗರ ಚೌಡಯ್ಯನವರ ವಚನಗಳು ನಿಷ್ಠುರತೆ,ನೇರ ನುಡಿಗಳೊಗೊಂಡಿವೆ. ಇವರು ತಮ್ಮ ವಚನಗಳ ಮೂಲಕ ಮೌಢ್ಯ, ಕಂದಚಾರಗಳ ಕುರಿತು ಸಮಾಜಕ್ಕೆ ತಿಳಿಸಿದ್ದಾರೆ. ಇವರು ಶೋಷಣೆ ರಹಿತ ಸಮಾಜದ ಆಶಯ ಹೊಂದಿದ್ದರು. ಇವರ ವಚನಗಳಲ್ಲಿ ದಯಾಪರತೆಯಿಲ್ಲ ಎಲ್ಲರೂ ಸುಚಿಗಳಾಗಿರಬೇಕೆಂದು ಹೇಳುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ, ಡಾ. ಅಶೋಕ ಕುಮಾರ, ಹನುಮಪ್ಪ, ಶಿವಪ್ಪ ಬಡಿಗೇರ, ಶ್ರೀ ಕಾಂತ್ ಸಿಂಗಾಪುರ್ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
