ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಮಲ್ಲಮ್ಮ ತಾಯಿ ಚಿನ್ನಮ್ಮ ಪಲ್ಲೆದ್ ಇವರು ಹುಟ್ಟು ಹಬ್ಬದ ಪ್ರಯುಕ್ತ ಮಕ್ಕಳಿಗೆ ನೀರಿನ ಲೋಟಗಳನ್ನು ಹಾಗೂ ನೋಟ್ ಪುಸ್ತಕ ಹಾಗೂ ಪೆನ್ನು ವಿತರಿಸಿ ಹುಟ್ಟು ಹಬ್ಬ ಸರಕಾರಿ ಶಾಲೆಯಲ್ಲಿ ಆಚರಿಸಿಕೊಂಡರು.
ಶಾಲೆಗೆ 50 ನೀರಿನ ಲೋಟಗಳು ಹಾಗೂ ಮುದ್ದು ಮಕ್ಕಳಿಗೆ ನೋಟ್ ಬುಕ್ ಗಳು, ಪೆನ್ನು ಗಳು, ಚಾಕಲೇಟ್ ಗಳು ಮತ್ತು ಸಿಹಿಯನ್ನು ಹಂಚಿದ ಮಲ್ಲಮ್ಮ ತಾಯಿ ಚಿನ್ನಮ್ಮ ಪಲ್ಲೆದ್ ಢಣಾಪುರ ಇವರಿಗೆ ಶಾಲೆಯ ಮುಖ್ಯೋಪಾಧ್ಯಾಯರು , ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕ , ಶಿಕ್ಷಕಿ ವೃಂದದಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
