ಕೊಪ್ಪಳ/ಕನಕಗಿರಿ : ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗವು 3ನೇ ಅತಿದೊಡ್ಡ ಸಮಾಜವಾಗಿದ್ದು ಗಂಗಾವತಿ ಶಾಸಕ ಜನಾರ್ದನರೆಡ್ಡಿ ಅವರು ಮಾಜಿ ಸಚಿವ ಶ್ರೀರಾಮುಲು ಅವರ ಜನ ಬೆಂಬಲದಿಂದ ಶಾಸಕರಾಗಿ ಗೆದ್ದು ಈಗ ನಾನೇ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಬೆಳೆಸಿರುವುದಾಗಿ ಹೇಳುವದು ಹಾಸ್ಯಾಸ್ಪದವಾಗಿದೆ ಎಂದು ಯುವ ನಾಯಕರಾದ ಯಮನೂರ ನಾಯಕ ಇದ್ಲಾಪುರ್ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ರಾಜ್ಯದಲ್ಲಿ ನಾಯಕ ಜನಾಂಗ 3 ನೇ ಅತಿದೊಡ್ಡ ಸಮಾಜ ಎಂಬುದು ಗಂಗಾವತಿ ಶಾಸಕ
ಜನಾರ್ಧನರೆಡ್ಡಿ ಅವರ ಗಮನಕ್ಕಿರಲಿ. ಜನಾರ್ಧನ ರೆಡ್ಡಿ ಅವರು ರಾಜಕೀಯವಾಗಿ ಬೆಳೆದದ್ದು ಶ್ರೀರಾಮುಲು ಹೆಸರೇಳಿ ನಾಯಕ ಜನಾಂಗದಿಂದ ಬೆಳೆದದ್ದು ಎಂಬುದನ್ನು ಮರೆತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ನಿಮ್ಮ ಬೆನ್ನಿಗೆ ನಿಂತಿದ್ದು ಇದೇ ವರ್ಗ ಎಂಬುದು ನೆನಪಿರಲಿ,
ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಯಕ ಜನಾಂಗ ಎಸ್ ಟಿ ನಕಲಿ ಜಾತಿ ಪ್ರಮಾಣ ಪತ್ರಗಳ ವಿಚಾರವಾಗಿ ಬಿಜೆಪಿ ವಿರುದ್ಧ ತಿರುಗಿ ಬಿದ್ದ
ಪರಿಣಾಮವಾಗಿ ಸೋಲನುಭವಿಸಿದೆ. ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಇದೇ ಸಮಾಜದ ರಾಜಕಾರಣಿಗಳು ಕಾರಣ.ಬೇರೆ ಪಕ್ಷದಲ್ಲಿ ಗೆದ್ದು ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿ ಬಲ ತುಂಬಿದರು. ಆದರೆ ಅಧಿಕಾರಕ್ಕೇರಲು ಕಾರಣರಾದ ಇದೇ ನಾಯಕ ಜನಾಂಗದ ಶ್ರೀರಾಮುಲು ಕೆ.ಶಿವನಗೌಡನಾಯಕ, ರಾಜೂ ಗೌಡ, ಪ್ರತಾಪಗೌಡ ಪಾಟೀಲ್ ಹಾಗೂ ರಮೇಶ್ ಜಾರಕಿಹೊಳಿಯವರನ್ನು ಕಡೆಗಣಿಸುತ್ತಿದೆ. ಇವರೆಲ್ಲರೂ ಬಿಜೆಪಿ ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಲು ಕಾರಣರಾದವರು ಎಂಬು- ದನ್ನು ಈ ಪಕ್ಷದ ಮುಖಂಡರು ಒಮ್ಮೆ ಮನವರಿಕೆ ಮಾಡಿಕೊಳ್ಳ ಬೇಕು. ಈ ನಾಲ್ವರೂ ಬಿಜೆಪಿಯಿಂದಲೇ ಹಂತ ಹಂತವಾಗಿ ಕಡೆಗಣಿಸಿಲ್ಪಟ್ಟಿದ್ದಾರೆ. ಇತರೆ ಜನಾಂಗದ ಮುಖಂಡರು ಚುನಾವಣೆಯಲ್ಲಿ ಸೋತರೆ ವಿಧಾನಪರಿಷತ್ತು ಮತ್ತು ರಾಜ್ಯ ಸಭೆಗೆ ಆಯ್ಕೆ ಮಾಡಿ ಸ್ಥಾನಮಾನ ನೀಡುತ್ತಾರೆ. ಆದರೆ ನಾಯಕ ಜನಾಂಗದ ಈ ಮೇಲ್ಕಂಡ ನಾಲ್ವರಿಗೆ ಪಕ್ಷದಲ್ಲಿ ಯಾವ ಸ್ಥಾನ ನೀಡಿದೆ ? ಈ ಬಾರಿ ಈ ಜನಾಂಗ ಕಾಂಗ್ರೆಸ್ ಕಡೆ ವಾಲಿದ್ದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನಗಳಿಸಿ ಬಿಜೆಪಿ ಸೋತು ಸುಣ್ಣವಾಯಿತು. ಆದರೆ ಯಾವುದೇ ಪಕ್ಷ ಅಧಿಕಾರಕ್ಕೇರಿದರೂ ಉನ್ನತ ಅಧಿಕಾರ ಸ್ಥಾನಮಾನಗಳು ಮಾತ್ರ ಈ ವರ್ಗಕ್ಕೆ ನೀಡದೆ ಕಡೆಗಣನೆ ಮಾಡಲಾಗುತ್ತಿದೆ.
ವಾಲ್ಮೀಕಿ ನಾಯಕ ಸಮಾಜವನ್ನು ಕೇವಲ ಮತ ಬ್ಯಾಂಕಾಗಿ ಮಾಡಿಕೊಳ್ಳಲಾಗುತ್ತಿದೆ ಎಂದು ಯುವ ನಾಯಕರಾದಂತ ಯಮನೂರ ನಾಯಕ ಇದ್ಲಾಪುರ್ ಅವರು ಪತ್ರಿಕೆ ಹೇಳಿಕೆ ಮೂಲಕ ಗಂಭೀರವಾಗಿ ಆರೋಪಿಸಿದ್ದಾರೆ.
