ಕೊಪ್ಪಳ : ಗಂಗಾವತಿ, ಕಾರಟಗಿ, ಕನಕಗಿರಿ ತಾಲೂಕುಗಳ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆ ಹಾಲು ಒಕ್ಕೂಟದ ಮುಖ್ಯ ವ್ಯವಸ್ಥಾಪಕರಾದ ಪ್ರಭು ಶಂಕರ್ ಇವರು ತಾಲೂಕುಗಳಲ್ಲಿ ಹಾಲು ಸಹಕಾರ ಸಂಘಗಳಿಗೆ ಭೇಟಿ ನೀಡಿ, ಹಾಲಿನ ಗುಣಮಟ್ಟ, ರೈತರಿಗೆ ಕುಂದು ಕೊರತೆಗಳ ಬಗ್ಗೆ, ಸಂಘಗಳ ಬೆಳವಣಿಗೆ, ವಿಷಯಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘ ಕೋಟೆಯ ಕ್ಯಾಂಪ್ ಸಂಘದ ಅಧ್ಯಕ್ಷರು ಹಾಗೂ ಒಕ್ಕೂಟದ ಮಾಜಿ ಅಧ್ಯಕ್ಷರಾದ ಎನ್. ಸತ್ಯನಾರಾಯಣ ಇವರ ಜೊತೆ ಚರ್ಚಿಸಿದರು ಮುಂದಿನ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹಾಲು ಉತ್ಪಾದಕರ ರೈತರ ಪರವಾಗಿ ಧ್ವನಿ ಎತ್ತುವಂತೆ ಸಂಘಗಳಿಗೆ ಸರಕಾರದ ಯೋಜನೆಗಳನ್ನು ರೂಪಿಸುವಂತೆ, ಸಂಸದರು,ಸಚಿವರು ಹಾಗೂ ಶಾಸಕರು ಪ್ರಮುಖ ರಾಜಕೀಯ ಪ್ರತಿನಿಧಿಗಳಿಗೆ, ಒಕ್ಕೂಟದ ಎಲ್ಲಾ ನಿರ್ದೇಶಕರುಗಳಿಗೆ ಮಾಹಿತಿ ನೀಡಿ, ಒಕ್ಕೂಟದ ಮತ್ತು ಸಂಘಗಳ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು ಎಂದು ಒಕ್ಕೂಟದ ಮುಖ್ಯ ಅಧಿಕಾರಿಗಳಾದ ಪ್ರಭು ಶಂಕರ್ ತಿಳಿಸಿದರು. ಎನ್.ಸತ್ಯನಾರಾಯಣ ಮಾತನಾಡಿ, ಸುಮಾರು 50 ವರ್ಷಗಳಿಂದ ಸಂಘಗಳಿಗೆ ಶ್ರಮಿಸುತ್ತಿದ್ದು, ಇಂದಿನ ದಿನಮಾನಗಳಲ್ಲಿ ಒಕ್ಕೂಟದ ನಷ್ಟದಿಂದ ರೈತರಿಗೆ ಯಾವುದೇ ರೀತಿ ಯೋಜನೆಗಳು ತಲುಪುತ್ತಿಲ್ಲ, ಎಲ್ಲರೂ ಒಗ್ಗೂಡಿ ಕೆಲಸ ನಿರ್ವಹಿಸಿದರೆ ಒಕ್ಕೂಟದ ಬೆಳವಣಿಗೆ ತರಬಹುದು ಎಂದರು. ಈ ಸಂದರ್ಭದಲ್ಲಿ ಗಂಗಾವತಿ ತಾಲೂಕು ಅಧಿಕಾರಿಗಳಾದ ಎ ನಾರಾಯಣ, ದೇವೇಂದ್ರಪ್ಪ ಇವರ ಸಮ್ಮುಖದಲ್ಲಿ ಮುಖ್ಯ ಅಧಿಕಾರಿಗಳಾದ ಪ್ರಭು ಶಂಕರ್ ಉಪ ವ್ಯವಸ್ಥಾಪಕರಾದ ವೆಂಕಟೇಶ ಜವಳಿಗಿ, ಅಧಿಕಾರಿಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು, ಸಂಘದ ಕಾರ್ಯದರ್ಶಿಗಳು ಸಹಾಯಕರು ಉಪಸ್ಥಿತಿಯಲ್ಲಿದ್ದರು.
