೧. ಕಠೋರ ಸತ್ಯ.
ನಮ್ಮದು ಜಾತ್ಯಾತೀತ (ಜಾತ್ಯಾತೀತ), ರಾಷ್ಟ್ರ , ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳ
ಬಾಯಿ, ಭಾಷಣದಲ್ಲಿ,
ವಾಸ್ತವದಲಿ!?
ಜಾತೀಯತೆಯ ರಾಷ್ಟ್ರ,
ಇದಲ್ಲವೆ ಕಠೋರ ಸತ್ಯ!
೨. ಅಂದು -ಇಂದು.
ಅಂದಿನ ಕವಿಗಳ
ಕವನಗಳಲ್ಲಿ,
ಕಾಣುತ್ತಿತ್ತು ಮಣ್ಣಿನ
ವಾಸನೆ,
ಇಂದಿನ ಕವಿಗಳ
ಕವನಗಳಲ್ಲಿ?..
ಬರೀ ಹೆಣ್ಣಿನ ವಾಸನೆ!
೩. ಸಾಯುತಿದೆ ನುಡಿ.
ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಕ್ಕು,
ಮಾಡುತ್ತಿದ್ದೇವೆ ನಾವು,
ನಾಡು ನುಡಿಗೆ ನೋವು,
ಅಂತೆಯೇ ಕನ್ನಡ ಭಾಷೆಗಿಲ್ಲಿ,
ನಿತ್ಯವೂ ಸಾವು!
೪. ಸ್ಥಿತಿ.
ಇರುವಷ್ಟು ದಿನ
ಈ ದುರ್ಜನ,
ತಪ್ಪಿದ್ದಲ್ಲ,
ಇಂಥ ದೌರ್ಜನ್ಯ!
- ಶಿವಪ್ರಸಾದ್ ಹಾದಿಮನಿ
ಕೊಪ್ಪಳ.೫೮೩೨೩೧.
ಮೊ ೭೯೯೬೭೯೦೧೮೯.
