ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಂಕನೂರು ಹಾಗೂ ಸೋಂಪುರ, ಹೊಸೂರು ಗ್ರಾಮದಲ್ಲಿ ಕಲ್ಯಾಣ ಕರ್ನಾಟಕದ ಅನುದಾನದಡಿ 3.50 ಕೋಟಿ ರೂಗಳ ವೆಚ್ಚದ ಸಿ.ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಹಾಗೂ ಸದಸ್ಯರು ಗ್ರಾಮಸ್ಥರಿಂದ ಚಾಲನೆ ನೀಡಲಾಯಿತು.
“ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸ್ಥರಿಗೆ ಗುಣಮಟ್ಟದ ರಸ್ತೆ ನಿರ್ಮಿಸಿ, ಉತ್ತಮ ಸಂಚಾರಕ್ಕೆ ಹೆಚ್ಚು ಅನುಕೂಲ ಕಲ್ಪಿಸಿದ್ದು ಶಾಸಕರು ಹಾಗೂ ಸಿ.ಎಂ. ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿಯವರ ಕೊಡುಗೆ ಅಪಾರವಿದೆ ಹಳ್ಳಿಯ ಪ್ರಗತಿಗೆ ಆದ್ಯತೆ ರಾಯರೆಡ್ಡಿಯವರ ನೀಡಿದ್ದಾರೆ” ಎಂದು ಸಂಕನೂರು ಗ್ರಾ.ಪಂ ಅಧ್ಯಕ್ಷರಾದ ನಾಗಮ್ಮ ತಳವಾರ ಹೇಳಿಕೆ ನೀಡಿದರು.
ಈ ವೇಳೆಯಲ್ಲಿ ಗ್ರಾ.ಪಂ ಅಧ್ಯಕ್ಷರು ಸದಸ್ಯರು , ಮುಖಂಡರು ಹಾಗೂ PWD ಇಂಜಿನಿಯರ್ ಇದ್ದರು.
