ಕೊಪ್ಪಳ/ ಕುಕನೂರ:ದಿ. 08.02.2025 ಶನಿವಾರದಂದು ಬೆಳಗ್ಗೆ 9.30 ಗಂಟೆಗೆ ಕುಕನೂರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಹಕಾರ ಪಿತಾಮಹ ಶ್ರೀ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರ ಭಾವಚಿತ್ರದೊಂದಿಗೆ, ಮೆರವಣಿಗೆ ಮೂಲಕ ಬಂದು ಎಪಿಎಂಸಿ ಆವರಣದಲ್ಲಿ ಸಹಕಾರಿ ಜಾಗೃತಿ ಸಮಾವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಸದರಿ ಕಾರ್ಯಕ್ರಮಕ್ಕೆ ಸಹಕಾರಿ ಮಂತ್ರಿಯಾದ ಶ್ರೀ ಕೆ.ಎನ್. ರಾಜಣ್ಣ , ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ಶಿವರಾಜ ತಂಗಡಗಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಶ್ರೀ ಎಚ್ ಕೆ ಪಾಟೀಲ್, ಶಾಸಕರಾದ ಶ್ರೀ ಜಿ. ಟಿ. ದೇವೇಗೌಡ ಅವರು ಮತ್ತು ನಮ್ಮ ನಿಮ್ಮೆಲ್ಲರ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಸಲಹೆಗಾರರು & ಯಲಬುರ್ಗಾ ಶಾಸಕರಾದ ಸನ್ಮಾನ್ಯ ಶ್ರೀ ಬಸವರಾಜ ರಾಯರೆಡ್ಡಿ, ಇತರ ಅಧಿಕಾರಿ ಮತ್ತು ಮುಖಂಡರುಗಳು ಆಗಮಿಸುತ್ತಿದ್ದು, ಸದರಿ ಕಾರ್ಯಕ್ರಮಗಳಿಗೆ ತಮಗೆಲ್ಲರೂ ಆಗಮಿಸಬೇಕಾಗಿ ಬಸವರಾಜ್ ಉಳ್ಳಾಗಡ್ಡಿ ಹಾಗೂ ಹನುಮಂತಗೌಡ ಪಾಟೀಲ್ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ ಯಲಬುರ್ಗಾ – ಕುಕನೂರ ಇವರು ವಿನಂತಿಸಿದ್ದಾರೆ.
ವರದಿ:ಬಸವರಾಜ ಕೆ ಕಳಸಪ್ಪನವರ ,ಯಲಬುರ್ಗಾ
