ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಗ್ರಾಮೀಣ ಜನರಿಂದ ಸಾಧ್ಯವಾಗಿದೆ ಎಂದು ಕುದುರಿಮೋತಿಯ ವಿಜಯ ಮಹಾಂತ ಶ್ರಿಗಳು ಹೇಳಿದರು.
ತಾಲೂಕಿನ ಹಳ್ಳಿಗಳಲ್ಲಿರುವ ಜನರು ಧರ್ಮ ರಕ್ಷಣೆಗೆ ಆದ್ಯತೆ ನೀಡುತ್ತಿದ್ದಾರೆ.
ದುಡ್ಡು ಇದ್ದವರು ದೊಡ್ಡವರಲ್ಲ ವ್ಯಕ್ತಿತ್ವದಿಂದ ದೊಡ್ಡವರಾಗಬೇಕು ಎಂದರು.
ತಾಲೂಕಿನ ಸೋಂಪುರ- ಹೊಸೂರು ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಹಾಗೂ ಮಾರುತೇಶ್ವರ ಗುಡಿಯ ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನಗೈದ ಅವರು ಅಷ್ಟಾವರಣದ ಮಹತ್ವವನ್ನು ವಿವರಿಸಿದರು.
ಹಾಲಕೇರಿಯ ಮುಪ್ಪಿನ ಬಸವಲಿಂಗೇಶ್ವರ ಶ್ರೀಗಳು, ಯಲಬುರ್ಗಾ ಶ್ರೀಧರ ಹಿರೇಮಠದ ಬಸವಲಿಂಗೇಶ್ವರ ಶ್ರೀಗಳು, ಚಂದ್ರಶೇಖರ ಸ್ವಾಮಿಗಳು ಆಶೀರ್ವಚನ ಗೈದರು.
ಧರ್ಮಶಾಸ್ತ್ರದ ಬಗ್ಗೆ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಶ್ರೀ ವೀರಣ್ಣ ನಿಂಗೋಜಿ ಉಪನ್ಯಾಸ ನೀಡಿದರು.
ಗ್ರಾಮದ ಹಿರಿಯರಾದ ಹನುಮಂತಪ್ಪ ಬೇರಗಿ, ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮದ ಹಿರಿಯರಾದ ಮುತ್ತಪ್ಪ ಅಂಗಡಿ, ಶರಣಪ್ಪ ಆರೇರ, ನೀಲಮ್ಮ ತಮ್ಮಿನಾಳ, ರಾಮನಗೌಡ, ಶರಣಪ್ಪ ಆರೇರ, ಶೇಖಪ್ಪ ಬೇರಗಿ, ಇನ್ನಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಹಲವಾರು ಮಹಿಳೆಯರು ಶ್ರದ್ದಾ ಭಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ಶಿಕ್ಷಕ ಮಹೇಶ್ ಆರೇರ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹನುಮಂತಗೌಡ ವಂದಿಸಿದರು.
ವರದಿ: ಬಸವರಾಜ ಕೆ ಕಳಸಪ್ಪನವರ, ಯಲಬುರ್ಗಾ
