
ಕನ್ನಡಾಭಿಮಾನ ಬೆಳೆಸಿಕೊಳ್ಳುವಂತೆ ಕರೆ ನೀಡಿದ ಶಿಕ್ಷಕ ಸಾಹಿತಿ ಕಲ್ಲಪ್ಪ ಕವಳಕೇರಿ.
ಕೊಪ್ಪಳ: ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಸಮೀಪದ ಭಾಗ್ಯನಗರದಲ್ಲಿ ಉಪನ್ಯಾಸ ಮತ್ತು ಕವಿಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಉಪನ್ಯಾಸಕರಾದ ಡಾ.ಮಹಾಂತೇಶ ನೆಲಾಗಣಿ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿಕ್ಷಕ, ಸಾಹಿತಿಗಳಾದ ಕಲ್ಲಪ್ಪ ಕವಳಕೇರಿ ಅವರು ,” ಕೊಪ್ಪಳ ಜಿಲ್ಲೆಯ ಚುಟುಕು ಸಾಹಿತ್ಯ ಬೆಳೆದು ಬಂದ ದಾರಿ ” ಕುರಿತು ಸವಿಸ್ತಾರವಾಗಿ ಮಾತನಾಡಿ, ಜಿಲ್ಲೆಯ ಬಹಳಷ್ಟು ಕವಿಗಳು, ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ, ಅವರಲ್ಲಿ ಪ್ರಮುಖವಾಗಿ, ಡಾ.ಮಹಾಂತೇಶ ಮಲ್ಲನಗೌಡರು, ಶಿ.ಕಾ . ಬಡಿಗೇರ, ಶ್ರೀನಿವಾಸ ಚಿತ್ರಗಾರ, ಈರಪ್ಪ ಬಿಜಲಿ,
ಪುಷ್ಪಲತಾ ಯೋಳಭಾವಿ,
ಶಿವಪ್ರಸಾದ್ ಹಾದಿಮನಿ, ಜಿ.ಎಸ್ ಗೋನಾಳ, ಇನ್ನೂ ಮುಂತಾದವರು, ಸಾಹಿತ್ಯಿಕವಾಗಿ ಮುಂಚೂಣಿಯಲ್ಲಿದ್ದಾರೆ,
ಇಂದಿನ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಜನರಲ್ಲಿ ಆಸಕ್ತಿ ಕಡಿಮೆಯಾಗತ್ತಿರುವುದಕ್ಕೆ, ವಿಷಾದ ವ್ಯಕ್ತಪಡಿಸುತ್ತಾ, ಕನ್ನಡ ಭಾಷೆಯನ್ನು, ಕನ್ನಡ ಸಾಹಿತ್ಯವನ್ನು ನಾವೇ ಉಳಿಸಿ ಬೆಳೆಸುವ ಸಂಕಲ್ಪವನ್ನು ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಬಾಳಪ್ಪ, ವೀರಾಪುರ ವಕೀಲರು, ಕನ್ನಡ ಭಾಷೆ ಅಭಿವೃದ್ಧಿಯಾಗ ಬೇಕಾದರೆ, ನಾವೆಲ್ಲರೂ ನಮ್ಮ ಮಾತೃಭಾಷೆಯನ್ನು ಪ್ರೀತಿಸಲೇ ಬೇಕು, ಎಲ್ಲಾ ಭಾಷೆಗಳನ್ನು ಗೌರವಿಸುತ್ತಾ, ನಮ್ಮ ಕನ್ನಡವನ್ನು ಬೆಳೆಸೋಣ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ಕವಿ, ಶಿ.ಕಾ ಬಡಿಗೇರ, ಸಾಹಿತ್ಯವನ್ನು ಬೆಳೆಸುವ ಕೆಲಸ
ಆಗಬೇಕಿದೆ,ಎಂದು ಹೇಳಿದರು.
ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರುದ್ರಪ್ಪ ಭಂಡಾರಿ ಅವರು ಸರ್ವರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಚುಟುಕು ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು , ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಂಡು
ಸಾಹಿತ್ಯದ ಸವಿಯನ್ನು ಎಲ್ಲೆಡೆಯೂ ಪಸರಿಸುವ ಕಾರ್ಯ ಮಾಡೋಣ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮಹಾಂತೇಶ ನೆಲಾಗಣಿ ಅವರು , ಸಾಹಿತ್ಯ, ಸಾಂಸ್ಕೃತಿಕ , ಕಾರ್ಯಕ್ರಮಗಳು, ಹೆಚ್ಚು ಹೆಚ್ಚು,ನಡೆಯುವುದರಿಂದ ಸಾಹಿತ್ಯವೂ ಬೆಳೆಯುತ್ತದೆ, ನಾವೂ ಬೆಳೆಯುತ್ತೇವೆ ಎಂದು ಹೇಳಿದರು.
ನಂತರ ಕವಿಗೋಷ್ಠಿ ಕಾರ್ಯಕ್ರಮ ಆರಂಭವಾಯಿತು.
ಈ ಕವಿಗೋಷ್ಠಿಯಲ್ಲಿ ಹದಿನೈದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕವಿ/ ಕವಿಯತ್ರಿಯರು ಭಾಗವಹಿಸಿ ಕವನ, ಚುಟುಕು ವಾಚನ ಮಾಡಿದರು.
ಅವರಲ್ಲಿ ಪ್ರಮುಖವಾಗಿ, ಪುಷ್ಪಲತಾ ಯೋಳಭಾವಿ, ಎ.ಪಿ.ಅಂಗಡಿ, ವಿದ್ಯಾಶ್ರೀ ಹಿರೇಮಠ, ಅಕ್ಕಮಹಾದೇವಿ ಅಂಗಡಿ, ಈರಪ್ಪ ಬಿಜಲಿ, ಶಿ.ಕಾ.ಬಡಿಗೇರ, ಬಾಳಪ್ಪ, ವೀರಾಪುರ, ಆನಂದ ಕಲಕ ಬಂಡಿ, ಅಮೀನ ಸಾಹೇಬ್ ಮುಲ್ಲಾ, ರವಿ ಹಿರೇಮನಿ, ಶಿವಪ್ರಸಾದ್ ಹಾದಿಮನಿ, ರವಿ ಸ್ವಾಮಿ ಹಿರೇಮಠ, ಮಹಾಲಕ್ಷ್ಮಿ,ಮುಂಡರಗಿ, ಮುಂತಾದವರು ಕವನ , ಚುಟುಕು ವಾಚನ ಮಾಡಿದರು.
ಇದೇ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ಮಹಾಂತೇಶ ನೆಲಾಗಣಿ ಅವರನ್ನು ಕವಿಯತ್ರಿ, ಶಿಕ್ಷಕಿ, ಶ್ರೀಮತಿ ವಿದ್ಯಾಶ್ರೀ ಹಿರೇಮಠ ದಂಪತಿಗಳು ಸನ್ಮಾನಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕವಿಯತ್ರಿ ಅಕ್ಕಮಹಾದೇವಿ ಅಂಗಡಿ ಅವರು ಪ್ರಾರ್ಥಿಸಿದರು, ಕಾರ್ಯಕ್ರಮವನ್ನು ಕವಿ, ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಅಚ್ಚುಕಟ್ಟಾಗಿ ನಿರೂಪಿಸಿ, ವಂದಿಸಿದರು.
