ಕೊಪ್ಪಳ : ಸಂತ ಸೇವಾಲಾಲ್ ಅವರು ಬಂಜಾರ ಸಮಾದಯದ ಸಾಂಸ್ಕೃತಿಕ ನಾಯಕ ಮತ್ತು ಪವಾಡ ಪುರುಷರಾಗಿದ್ದರು ಎಂದು ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿಯಾವರು ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರದಂದು ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ ಜಯಂತಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ ಸೇವಾಲಾಲ್ ಅವರು 18 ನೇ ಶತಮಾನದಲ್ಲಿ ಹುಟ್ಟಿದ ಪವಾಡ ಪುರುಷ. ಅವರು ಬಂಜಾರ ಸಮುದಾಯಕ್ಕಾಗಿ ತಮ್ಮ ಜೀವನ ಪೂರ್ತಿ ಹೋರಾಟ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಸಮ ಸಮಾಜಕ್ಕಾಗಿ ಹೋರಾಟ ಮಾಡಿದ್ದಾರೆ. ಬಂಜಾರ ಸಮುದಾಯದವರು ಮೂಲತಃ ರಾಜಸ್ಥಾನದವರು. ಇವರು ಅಲೆಮಾರಿ ಸಮುದಾಯದವರಾಗಿದ್ದಾರೆ, ಇವರು ವೃತ್ತಿ ದಿನಸಿ ಮತ್ತು ಲವಣದ ವ್ಯಾಪಾರವಾಗಿದೆ ಎಂದು ತಿಳುಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಾಣಿಜ್ಯಶಾಸ್ತ್ರದ ಮುಖ್ಯಸ್ಥ ಶ್ರೀ ವಿಠೋಬ ಎಸ್ ಅವರು ಮಾತನಾಡಿ ನಾವೆಲ್ಲರೂ ಸೇವಾಲಾಲ್ ಅವರು ಚಿಂತನೆಗಳನ್ನು ಜೀವನದಲ್ಲಿ ಅಳವಡಿಕೋಳ್ಳಬೇಕು. ಸೇವಾಲಾಲ್ ಅವರು ದಾವಣಗೆರೆ ಜಿಲ್ಲೆಯ ಸುರೇಗೊಂಡನಪ್ಪ ದವರು. ಇವರು ಬಂಜಾರ ಸಮುದಾಯದ ಏಳ್ಗೆಗಾಗಿ ಹೋರಾಟ ಮಾಡಿದ್ದಾರೆ. ಇವರಿಗೆ ಸಿರಸಿಯ ಮಾರಿಕಾಂಬ ದೇವಿಯ ಆಶೀರ್ವಾದ ಇತ್ತು. ನಮ್ಮ ಸಮಾಜದಲ್ಲಿ ಇಂದು ಉನ್ನತ ಶಿಕ್ಷಣ ಪಡೆದವರು ಜಾತಿ ಭೇದ ಭಾವ ಮಾಡುತ್ತಿದ್ದೇವೆ ಇದನ್ನು ಮಾಡಬಾರದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಡಾ. ಪ್ರದೀಪ್ ಕುಮಾರ್, ಡಾ. ನರಸಿಂಹ, ಶ್ರೀ ಮತಿ ಸುಮಿತ್ರಾ ಎಸ್. ವಿ. ಕು. ಶುಭ, ಕಾಲೇಜಿನ ಭೋದಕೇತರ ಸಿಬ್ಬಂದಿಗಳು ಅಲಾಭಕ್ಷಿ, ಸೌಮ್ಯ ಹಿರೇಮಠ್, ಹನುಮಪ್ಪ ಹಾಗೂ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು, ಎಲ್ಲಾ ಭೋದಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
- ಕರುನಾಡ ಕಂದ
