ಕೊಪ್ಪಳ : ಕಾರ್ಖಾನೆ ಸ್ಥಾಪನೆಗೆ ವಿರೋಧ ಮಾಡಿ, ನಿನ್ನೆ ಕೊಪ್ಪಳದಲ್ಲಿ ನಡೆದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ, ಜನಪ್ರತಿನಿಧಿಗಳು, ಸಾಹಿತಿಗಳು, ರೈತರು,ಕಾರ್ಮಿಕರು, ಸಾರ್ವಜನಿಕರು, ಸಾಗರೋಪಾದಿಯಲ್ಲಿ ಸೇರಿ ಬೃಹತ್ ಸಮಾವೇಶದ ವೇದಿಕೆಯಂತೆ, ತಾಲೂಕು ಕ್ರೀಡಾಂಗಣದಲ್ಲಿ ಸಜ್ಜು ಗೊಳಿಸಿದ ವೇದಿಕೆಯಲ್ಲಿ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಖಾನೆ ಸ್ಥಾಪನೆಯಿಂದ ಜನತೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಇದಕ್ಕೆ ನಮ್ಮ ವಿರೋಧವಿದೆ,ಎಂದು ಹೇಳುತ್ತಾ ಕ್ಷಣ ಕಾಲ ಭಾವುಕರಾಗಿ ಕಂಬನಿ ಮಿಡಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಈ ಬಗ್ಗೆ ಮಾತನಾಡಿದ್ದಾಗಿ ತಿಳಿಸಿದರು. ಶಾಸಕರು ಮತ್ತು ಕೊಪ್ಪಳ ಜಿಲ್ಲೆಯ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರೂ ಸಹ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಈ ಕಾರ್ಖಾನೆಯ ಸ್ಥಾಪನೆಗೆ ಅನುಮತಿ ರದ್ದುಗೊಳಿಸಲು ಕೋರುತ್ತೇವೆ ಎಂದರು. ವೇದಿಕೆಯಲ್ಲಿ ಜನಾರ್ದನ ರೆಡ್ಡಿ, ಸಿ .ವಿ .ಚಂದ್ರಶೇಖರ್, ಬಸವರಾಜ ರಾಯರೆಡ್ಡಿ, ಅಲ್ಲಮಪ್ರಭು ಬೆಟ್ಟದೂರು ಮುಂತಾದ ರಾಜಕೀಯ ಮುಖಂಡರು ಉಪಸ್ಥಿತರಿದ್ದರು.
ಕಾರ್ಖಾನೆಯ ಸ್ಥಾಪನೆಯನ್ನು ಎಲ್ಲರೂ ಪಕ್ಷಾತೀತವಾಗಿ ವಿರೋಧ ಮಾಡಿರುವುದು ವಿಶೇಷವಾಗಿತ್ತು.
