ಕೊಪ್ಪಳದ ಖ್ಯಾತ ಕವಿ, ವಕೀಲರಾದ, ವಿಜಯ ಅಮೃತರಾಜ್ ಅವರ ನೇತೃತ್ವದಲ್ಲಿ ಕೊಪ್ಪಳದಲ್ಲಿ ಉಕ್ಕು ಕಾರ್ಖಾನೆ ಸ್ಥಾಪನೆಗೆ ಸರಕಾರ ಅನುಮತಿ ಕೊಟ್ಟಿರುವುದನ್ನು ಖಂಡಿಸಿ,ವಿರೋಧ ವ್ಯಕ್ತಪಡಿಸಿ,
ಕಾವ್ಯ ರಚಿಸಲು ಒಂದು ವಾರದ ಮುಂಚೆಯೇ ಸಾಹಿತಿಗಳಿಗೆ ಸೂಚಿಸಲಾಗಿತ್ತು.
ಅದರಂತೆ ಕೊಪ್ಪಳ ಗವಿಮಠದ ರಸ್ತೆಯಲ್ಲಿ, ಬೀದಿ ಕವಿಗೋಷ್ಠಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಈ ಕವಿಗೋಷ್ಠಿಯಲ್ಲಿ ಕೊಪ್ಪಳದ ಖ್ಯಾತ ಬಂಡಾಯ ಸಾಹಿತಿಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಪತ್ರಕರ್ತ, ಬರಹಗಾರ, ಕವಿ, ಸಿರಾಜ್ ಬಿಸರಹಳ್ಳಿ, ಕವಿಗಳಾದ ಡಿ.ಎಂ.ಬಡಿಗೇರ, ಅಮರದೀಪ್, ಬಸವರಾಜ ಕರುಗಲ್, ವಿಜಯ ಅಮೃತರಾಜ್, ಸಂಗಮೇಶ್ವರ ಪಾಟೀಲ, ಶಿವಪ್ರಸಾದ್ ಹಾದಿಮನಿ, ರಂಗನಾಥ ಅಕ್ಕಸಾಲಿಗ, ಸೋಮು ಬೆಣ್ಣಿ, ಅಲ್ಲಾವುದ್ದೀನ್ ಯಮ್ಮಿ, ಸುರೇಶ್ ಗೌಡ್ರು ಹಿರೇ ಗೌಡ್ರು, ಮಂಜುನಾಥ ಗೊಂಡಬಾಳ ಮುಂತಾದವರು ಕವನ ವಾಚನ ಮಾಡುವ ಮೂಲಕ ಪ್ರತಿಭಟನಾ ಕಾವ್ಯೋತ್ಸವಕ್ಕೆ ವಿಶೇಷ ಮೆರಗು ನೀಡಿ ಯಶಸ್ವಿ ಬೀದಿ ಕವಿಗೋಷ್ಠಿ, ಸಾರ್ವಜನಿಕರ ಗಮನ ಸೆಳೆಯಿತು
