ಕೊಪ್ಪಳ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕೊಪ್ಪಳ ರೇಂಜರ್ಸ್ ಘಟಕ ಮಂಗಳವಾರದಂದು ಸಂಸ್ಥಾಪಕ ದಿನಾಚರಣೆ ಮತ್ತು ಸರ್ವಧರ್ಮ ಪ್ರಾರ್ಥನಾ ಸಭೆಯನ್ನು ಕಾಲೇಜಿನಲ್ಲಿ ಏರ್ಪಡಿಸಿತ್ತು.
ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಂಸ್ಥಾಪಕರಾದ ಬಿಡೆನ್ ಪೌ ವೆಲ್ ರವರ ಜನ್ಮದಿನ ಫೆಬ್ರವರಿ 22ರಂದು ವಿಶ್ವದಾದ್ಯಂತ ಸಂಸ್ಥಾಪನಾ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ಅದರ ಭಾಗವಾಗಿ ಕಾಲೇಜಿನಲ್ಲಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಬಿಡನ್ ಪೋವೆಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವ ಮೂಲಕ ಸಂಸ್ಥಾಪನಾ ದಿನಾಚರಣೆಯನ್ನು ನೆರವೇರಿಸಲಾಯಿತು.
ಘಟಕದ ವಿದ್ಯಾರ್ಥಿನಿಯರು ಸರ್ವಧರ್ಮದ ಸಾರವನ್ನು ಒಳ್ಳೆಯ ನುಡಿಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಂಡರು. ರೇಂಜರ್ಸ್ ಘಟಕದ ಸಂಚಾಲಕರಾದ ಶುಭ ಟಿ. ಇ ರವರು ಪ್ರಾಸ್ತಾವಿಕ ಭಾಷಣ ಮಾಡಿ ಸಂಸ್ಥಾಪನಾ ದಿನಾಚರಣೆಯ ಮಹತ್ವವನ್ನು ತಿಳಿಸಿ ಘಟಕದ ವಿದ್ಯಾರ್ಥಿನಿಯರು ಘಟಕದ ಕಾರ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಲು ಸೂಚಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ. ಗಣಪತಿ ಕೆ ಲಮಾಣಿ ರವರು ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಸನದಲ್ಲಿ ಹಾಗೂ ಮಹಿಳಾ ಸಬಲೀಕರಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸರ್ವಧರ್ಮದ ಮೂಲ ಮಾನವೀಯತೆ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವೆಂದು ತಿಳಿಸಿ ವಿದ್ಯಾರ್ಥಿನಿಯರು ಸಾಹಸೂರ್ ಪೂರ್ಣ ಕಾರ್ಯ ಚಟುವಟಿಕೆಗಳನ್ನು ತೊಡಗಿಕೊಳ್ಳಲು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾಕ್ಟರ್ ಹುಲಿಗಮ್ಮ, ಆಂತರಿಕ ಗುಣಮಟ್ಟ ಬರವಸಾಕೋಶದ ಸಂಚಾಲಕರಾದ ಡಾ. ಅಶೋಕ್ ಹಾಗೂ ಘಟಕದ ನಿಕಟ ಪೂರ್ವ ಸಂಚಾಲಕರಾದ ಶ್ರೀಮತಿ ಸುಮಿತ್ರರವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಶಂಕ್ರಮ್ಮ ಕಾರ್ಯಕ್ರಮವನ್ನು ನಿರೂಪಿಸಿದರು, ವಿದ್ಯಾರ್ಥಿನಿ ಭವ್ಯ ರವರು ಸ್ವಾಗತ ಕೋರಿದರು, ವಿದ್ಯಾರ್ಥಿ ನಾಗರತ್ನ ರವರು ವಂದನಾರ್ಪಣೆಗಳನ್ನು ತಿಳಿಸಿದರು.
