ಶಿವ ಪಾರ್ವತಿಯ ವಿವಾಹ ದಿನವು
ಶಿವರಾತ್ರಿ ಜಾಗರಣೆ ಶುಭ ದಿನವು
ಜಪಿಸಲಿಂದು ಜಗದೀಶನ ಮಂತ್ರವು
ಪಾಪ ನಾಶವು ಪುಣ್ಯಪ್ರಾಪ್ತಿ ಫಲವು.
ಮೂರು ಜಗದ ಒಡೆಯ ಜಗದೀಶ
ಪಾರ್ವತಿಯ ಪ್ರಿಯ ಪತಿ ಪರಮೇಶ
ಸರ್ವರನು ಕಾಯುವ ನಿತ್ಯ ಸರ್ವೇಶ
ಕಡಲ ತೀರದಿ ನೆಲೆಸಿಹ ಮುರುಡೇಶ.
ಗಜ ಚರ್ಮ ತೊಟ್ಟ ಚರ್ಮಾಂಭರ
ಮುಡಿಯಲ್ಲಿ ಗಂಗೆ ಇಟ್ಟ ಗಂಗಾಧರ
ನಂದಿಯ ಏರಿ ಹೊರಟ ನಂದೀಶ್ವರ
ಸತಿಯರ್ದದೇಹದ ಅರ್ಧನಾರೀಶ್ವರ.
ನಿತ್ಯ ಓಂ ನಮಃ ಶಿವಾಯ ಎನ್ನೋಣ
ಶಿವ ನಾಮ ಸ್ಮರಣೆಯ ಮಾಡೋಣ
ಭಕ್ತಿ ಇಟ್ಟು ಶಿವನ ಶಕ್ತಿ ತಿಳಿಯೋಣ
ಶುದ್ಧ ಮಾರ್ಗದಿ ಮುಕ್ತಿ ಪಡೆಯೋಣ.
- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ : 9740199896.
