ಹೆಣ್ಣು ಅಬಲೆ ಎಂದಿರಿ
ತಪ್ಪು ಸಬಲೆ ಎನ್ನಿರಿ
ಹೆಣ್ಣು ಶಕ್ತಿ ಮರೆಯದಿರಿ
ಹೆಣ್ಣನ್ನು ಎಂದು ಕೆಣಕದಿರಿ
ಹೆಣ್ಣು ಶಿಕ್ಷಣದ ಕಣ್ಣು
ನಮ್ಮ ಜ್ಞಾನದ ಹೆಣ್ಣು
ಎಲ್ಲ ಸರಸ್ವತಿ ಹೆಣ್ಣು
ನಮ್ಮ ಭಾರತದ ಕಣ್ಣು
ದೇವರ ರೂಪ ಕಣ್ಣು
ಜಗ ಮೆಚ್ಚಿದ ಹೆಣ್ಣು
ಮನುಷ್ಯನ ಕಣ್ಣು ಹೆಣ್ಣು
ಗುರುವೇ ಅವರು ಹೆಣ್ಣು
ಯಶಸ್ಸು ಕೊಡೋಳು ಹೆಣ್ಣು
ಪ್ರೋತ್ಸಾಹ ನೀಡುವಳೆ ಹೆಣ್ಣು
ಎಲ್ಲ ಶಕ್ತಿ ತುಂಬವಳೆ ಹೆಣ್ಣು
ಭಕ್ತಿ ತುಂಬುವವಳು ಹೆಣ್ಣು
ಸಮಾಜದ ಮಿಂಚು ಹೆಣ್ಣು
ಸಂಸಾರ ಹೊತ್ತವಳು ಹೆಣ್ಣು
ಜನನ ಜನುಮ ಭೂಮಿ ಹೆಣ್ಣು
ಭೂಮಿ ಒಡಲು ಹೆಣ್ಣು
- ಅಕ್ಕಮಹಾದೇವಿ ಅಂಗಡಿ, ರಾಜೂರು ಕುಕನೂರು ತಾಲೂಕು, ಕೊಪ್ಪಳ ಜಿಲ್ಲೆ.