೧. ಸ್ಫೂರ್ತಿ.
ಗೆಳೆಯನೊಬ್ಬ ಕೇಳಿದ
ನಿಮ್ಮ ಬರಹಕ್ಕೆ
ಯಾರು ಸ್ಫೂರ್ತಿ?,
ಆಗ ನಾ ಹೇಳಿದೆ,
ಅವಳೇ ಸ್ಫೂರ್ತಿ!
೨. ಮಹಿಳೆ.
ತುಂಬಲು ಇಳೆ,
ಕಾರಣ ಮಹಿಳೆ ,
ಸೃಷ್ಟಿ, ಸ್ಥಿತಿ,ಲಯ ಗಳಿಗೂ
ಕಾರಣ ಇವಳೆ!..
೩. ಹೆಣ್ಣು.
ಹೆಣ್ಣೆಂದರೆ ಶಕ್ತಿ,
ಆದರಿಂದು
ಮಾಡಿದ್ದೇವೆ ನಿಶ್ಯಕ್ತಿ,
ಹೆಣ್ಣೆಂದರೆ ಸಬಲೆ,
ಮಾಡಿದ್ದೇವೆ ಅಬಲೆ!
ಹೆಣ್ಣೆಂದರೆ ಮಮತಾಮಯಿ,
ಇಲ್ಲವಾಗಿಸಿದ್ದೇವೆ ಅವಳ ಬಾಯಿ,…
ಈ ಜಗವೇ ಹೀಗೆ,
ಈ ಜನರೇ ಹೀಗೆ!…
೪. ಸ್ವಂತಿಕೆ .
ಇರದಿದ್ದರೂ ಪರ್ವಾಗಿಲ್ಲ
ನಿನಗೆ ಬುದ್ದಿವಂತಿಕೆ,
ಬಿಟ್ಟು ಕೊಡದಿರು,
ನಿನ್ನ ಸ್ವಂತಿಕೆ!.
- ಶಿವಪ್ರಸಾದ್ ಹಾದಿಮನಿ ,ಕನ್ನಡ ಉಪನ್ಯಾಸಕರು.
ಕೊಪ್ಪಳ. ೫೮೩೨೩೧.
ಮೊಬೈಲ್ ಸಂಖ್ಯೆ.
೭೯೯೬೭೯೦೧೮೯.