ಕೊಪ್ಪಳ: ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು
ಆಚರಿಸಲಾಯಿತು.
ವಿದ್ಯುಕ್ತವಾಗಿ ಉದ್ಘಾಟಿಸಲಾದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಿಳಾ ಸಂಘಟನೆಯ ಶ್ರೀಮತಿ ಶಾರದಮ್ಮ ಅವರು ಪ್ರಸ್ತುತ ಸಮಾಜದಲ್ಲಿ ಸ್ತ್ರೀ ಸಮುದಾಯವು ಎಷ್ಟೇ ಮುಂದುವರಿದರೂ, ಆರ್ಥಿಕ ವಾಗಿ ಸಧೃಡವಾಗದ ಹೊರತು ಮಹಿಳೆಯ ಪ್ರಗತಿ ಅಸಾಧ್ಯ, ಕಠಿಣ ಪರಿಶ್ರಮದ ಮೂಲಕ
ಮೇಡಂ ಕ್ಯೂರಿ, ಸಾವಿತ್ರಿ ಬಾಯಿ ಫುಲೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ಚೆನ್ನಮ್ಮ, ಮುಂತಾದ ಮಹಿಳೆಯರು, ಕಠಿಣ ಪರಿಶ್ರಮದ ಮೂಲಕ ಸಾಧನೆಯ ಶಿಖರವೇರಿ ಇಂದಿನ ಪೀಳಿಗೆಗೆ ಮಾದರಿ ಯಾಗಿದ್ದಾರೆ, ಹೋರಾಟ ಮನೋಭಾವವನ್ನು ಇಂದಿನ ಮಹಿಳೆಯರು ರೂಢಿಸಿಕೊಳ್ಳಬೇಕು ಎಂದು ಮಾತನಾಡಿದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿಗಳಾಗಿದ್ದ ಮಂಜುಳಾ ಅವರು ಮಹಿಳೆಯರು ಸ್ವಾವಲಂಬಿಗಳಾದರೆ, ಮಹಿಳಾ ಜಾಗೃತಿ ತಾನೇ ತಾನಾಗಿ ಹುಟ್ಟುತ್ತದೆ, ಆ ನಿಟ್ಟಿನಲ್ಲಿ ಮಹಿಳೆಯರು ಪ್ರಯತ್ನವಾದಿಗಳಾಗಬೇಕಿದೆ ಎಂದರು.
ಕಾರ್ಯಕ್ರಮವನ್ನು ಸಂಯೋಜನೆ ಮಾಡಿದ್ದ, ಕಾಲೇಜಿನ ಹಿರಿಯ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ನಾಗರತ್ನ ತಮ್ಮಿನಾಳ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಮಹಿಳಾ ದಿನಾಚರಣೆಯ ಇತಿಹಾಸ, ಇವತ್ತು ಮಹಿಳಾ ಸಬಲೀಕರಣ, ಎತ್ತ ಸಾಗುತ್ತಿದೆ?
ಎನ್ನುವ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದರು.
ವೇದಿಕೆಯಲ್ಲಿದ್ದ ವಾಣಿಜ್ಯ ಶಾಸ್ತ್ರ ಮುಖ್ಯಸ್ಥರಾದ ಪ್ರೊ.ವಿಠೋಬ ಎಸ್, ಮಾತನಾಡುತ್ತಾ ರಾಷ್ಟ್ರ ಕವಿ ಶಿವರುದ್ರಪ್ಪ ಅವರ ಸ್ತ್ರೀ ಅಂದರೆ ಅಷ್ಟೇ ಸಾಕೆ? ಕವನದ ಕೆಲ ಸಾಲುಗಳನ್ನು ಉದ್ಗರಿಸಿ ,
ಮಹಿಳೆಯರ ಮಹತ್ವದ ಬಗ್ಗೆ ಮಾತಾಡುತ್ತಾ ಸಧ್ಯದ ಪರಿಸ್ಥಿತಿಯಲ್ಲಿ, ಮನುಷ್ಯನಲ್ಲಿರುವ ತಾರತಮ್ಯ ಮನೋಭಾವ ತೊಲಗಿ ಸಂವಿಧಾನದ ಸಮಾನತೆ, ಭ್ರಾತೃತ್ವ, ಶಿಕ್ಷಣ,ಸಂಘಟನೆ, ಹೋರಾಟದಂತಹ ಮನೋಭಾವನೆಗಳನ್ನು ಅಳವಡಿಸಿಕೊಂಡಾಗ, ಇಂತಹ ಮಹಿಳಾ ದಿನಾಚರಣೆಗಳಿಗೆ ಅರ್ಥ ಬರುತ್ತದೆ, ಎಂದರು.
ಮತ್ತೊಬ್ಬ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಪ್ರದೀಪ ಕುಮಾರ್, ಯು. ಅವರು ಇಂದು ಮಹಿಳೆಯರು ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುತ್ತಿರುವುದು, ಹೆಮ್ಮೆಯ ವಿಷಯವಾಗಿದೆ, ಆದರೆ ಬಹುಸಂಖ್ಯಾತ ಮಹಿಳೆಯರು ಇನ್ನೂ ಕೀಳರಿಮೆಯಲ್ಲಿರುವುದರಿಂದ ಆರ್ಥಿಕ ಹಿನ್ನಡೆ ಉಂಟಾಗಿದೆ ಎಂದರು.
ಕನ್ನಡ ಉಪನ್ಯಾಸಕ ಶಿವಪ್ರಸಾದ್ ಹಾದಿಮನಿ ಯವರು ಪ್ರಸ್ತುತ ಸಮಾಜದಲ್ಲಿ ಸ್ತ್ರೀ ಯರನ್ನು
ಸಮಾನತೆಯ ಭಾವದಿಂದ ನೋಡುವುದಕ್ಕೆ ಸಾಧ್ಯವಾಗುತ್ತಿಲ್ಲ, ಎಂಬ ವಿಷಾದ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ.ಗಣಪತಿ,ಕೆ.ಲಮಾಣಿ ಅವರು, ಇವತ್ತು ಶಿಕ್ಷಣದ ಮೂಲಕ , ಮಹಿಳೆಯರು ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ, ನಮ್ಮ ಕಾನೂನುಗಳು ಸಹ ಮಹಿಳಾ ಪರವಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕು, ಆ ನಿಟ್ಟಿನಲ್ಲಿ ಲಿಂಗ ಭೇದ ಮರೆತು ನಾವು ಮಹಿಳೆಯರಿಗೆ ಗೌರವ ಕೊಡುವ ಕಾರ್ಯವನ್ನು ಮಾಡೋಣ ಎಂದರು.
ಆರಂಭದಲ್ಲಿ ಬಿ.ಎ.ಅಂತಿಮ ವರ್ಷದ ವಿಧ್ಯಾರ್ಥಿನಿ ಮಹಾದೇವಿ, ಮತ್ತು ಸಂಗಡಿಗರು ಪ್ರಾರ್ಥಿಸಿದರು.
ಶಶಿಕಲಾ ಅವರು ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ತಸ್ಲೀಮಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಮಹೇಶ್ ಪೂಜಾರ, ಮಲ್ಲಿಕಾರ್ಜುನ ಮಡಿವಾಳರ, ನಿಂಗಪ್ಪ,ಕೆ. ನಿಂಗಪ್ಪ, ಡಿ.ಕೆ.,ಶಿ.ಕಾ . ಬಡಿಗೇರ, ವಿದ್ಯಾವತಿ ಜಂಗೀನ, ಪುತ್ರೇಶಗೌಡ, ಸಂತೋಷಿ ಬೆಲ್ಲದ, ಉಮಾದೇವಿ, ಬೋಧಕೇತರ ಸಿಬ್ಬಂದಿಗಳು, ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
- ಕರುನಾಡ ಕಂದ