ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಚಾಂಪಿಯನ್ಸ್ ಟ್ರೋಫಿ ಪಟ್ಟ ಅಲಂಕರಿಸಿದ ಭಾರತ

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ತಂಡ ದಾಖಲೆಯ 3ನೇ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುತ್ತಿಕ್ಕಿದೆ.

25 ವರ್ಷದ ಸೇಡು ತಿಳಿಸಿಕೊಂಡ ಟೀಮ್ ಇಂಡಿಯಾ-ನ್ಯೂಜಿಲ್ಯಾಂಡ್ ಅನ್ನು ಸೋಲಿಸಿ ಟ್ರೋಪಿಗೆ ಮುತ್ತಿಟ್ಟ ಭಾರತ ಚಾಂಪಿಯನ್ ಟ್ರೋಫಿ ಪಟ್ಟಲಂಕರಿಸಿದ ಟೀಮ್ ಇಂಡಿಯಾ ಟಿ 20 ವಿಶ್ವಕಪ್ ಬಳಿಕ ಮತ್ತೊಂದು ಟ್ರೋಫಿ 12 ವರ್ಷದ ಒಳಿಕ ಚಾಂಪಿಯನ್ ಪ್ರಸಸ್ತಿ ಗೆದ್ದ ಭಾರತ.

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್​ಗಳ ಭರ್ಜರಿ ಗೆಲುವಿನೊಂದಿಗೆ ಭಾರತ ತಂಡ ದಾಖಲೆಯ 3ನೇ ಚಾಂಪಿಯನ್ಸ್ ಟ್ರೋಫಿ ಕಿರೀಟಕ್ಕೆ ಮುತ್ತಿಕ್ಕಿ ಸಂಭ್ರಮಿಸಿದೆ. ಈ ಜಯದೊಂದಿಗೆ 2000ರ ಚಾಂಪಿಯನ್ಸ್ ಫೈನಲ್​ ಸೋಲಿಗೆ 2002, 2013ರಲ್ಲಿ ಟ್ರೋಫಿ ಎತ್ತಿ ಹಿಡಿದ್ದಿದ್ದ ಭಾರತ ಇದೀಗ 12 ವರ್ಷಗಳ ನಂತರ ಚಾಂಪಿಯನ್ಸ್ ಟ್ರೋಫಿ ಬರ ನೀಗಿಸಿದೆ. 2017ರಲ್ಲಿ ರನ್ನರ್​ಅಪ್ ಆಗಿದ್ದ ಮೆನ್ ಇನ್ ಬ್ಲ್ಯೂ, 2024ರ ವಿಶ್ವಕಪ್ ನಂತರ ಸತತ 2ನೇ ಐಸಿಸಿ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿದೆ. ಟೂರ್ನಿಯಲ್ಲಿ ಅಜೇಯ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದೆ ಭಾರತ.
ತವರಿನಲ್ಲಿ 2023ರ ಏಕದಿನ ವಿಶ್ವಕಪ್ ಸೋತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಟೀಮ್ ಇಂಡಿಯಾ, ಸತತ 2 ಟ್ರೋಫಿ ಗೆದ್ದು ಸಮಾಧಾನಪಡಿಸಿದೆ. ಕಿವೀಸ್ ನೀಡಿದ್ದ 252 ರನ್​ಗಳ ಗುರಿ ಬೆನ್ನಟ್ಟಿದ ರೋಹಿತ್ ಪಡೆ, 49 ಓವರ್​​ಗಳಲ್ಲಿ ಗುರಿ ಮುಟ್ಟುವುದರೊಂದಿಗೆ ಎರಡು ಟ್ರೋಫಿ ಜಯಿಸಿದ್ದ ಆಸ್ಟ್ರೇಲಿಯಾ ದಾಖಲೆ ಮುರಿದಿದೆ. ಈ ಪ್ರಶಸ್ತಿ ಗೆದ್ದ ಬಳಿಕ ರೋಹಿತ್​ ಶರ್ಮಾ ದಾಖಲೆ ನಿರ್ಮಿಸಿದ್ದಾರೆ. ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಎಂಎಸ್ ಧೋನಿ ಬಳಿಕ ವಿಶ್ವದ 2ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಂಗೂಲಿ, ಧೋನಿ ಬಳಿಕ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಭಾರತದ 3ನೇ ನಾಯಕ ರೋಹಿತ್​ ಶರ್ಮಾ.
ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯಿತು. ವಿಲ್ ಯಂಗ್ ಮತ್ತು ರಚಿನ್ ರವೀಂದ್ರ ಮೊದಲ ವಿಕೆಟ್​ಗೆ 57 ರನ್ ಕಲೆ ಹಾಕಿದರು. ಈ ಜೋಡಿಯನ್ನು ವರುಣ್ ಚಕ್ರವರ್ತಿ ಮುರಿದರು. ಪರಿಣಾಮ ಯಂಗ್ 15ಕ್ಕೆ ಆಟ ಮುಗಿಸಿದರು. ಬಳಿಕ 2 ಜೀವದಾನ ಪಡೆದಿದ್ದ ರಚಿನ್ ರವೀಂದ್ರ 37 ರನ್ ಗಳಿಸಿದ್ದಾಗ ಕುಲ್ದೀಪ್​ ಯಾದವ್ ಗೂಗ್ಲಿ ಎಸೆತಕ್ಕೆ ಕ್ಲೀನ್ ಬೋಲ್ಡ್ ಆದರು. ಬಳಿಕ ಕುಲ್ದೀಪ್ ಎಸೆದ ತನ್ನ ಎರಡನೇ ಓವರ್​​ನಲ್ಲೇ ಕೇನ್​ ವಿಲಿಯಮ್ಸನ್​ (14) ಸುಲಭ ಕೊಟ್ಟರು. ಟಾಮ್ ಲಾಥಮ್ (14) ಕೂಡಾ ಹೆಚ್ಚು ಹೊತ್ತು ಇರಲಿಲ್ಲ. ಇದರೊಂದಿಗೆ ಕಿವೀಸ್​ ಮೇಲೆ ಭಾರತದ ಸ್ಪಿನ್ನರ್​​​ಗಳ ಹಿಡಿತ ಸಾಧಿಸಿದರು.
ಹಂತದಲ್ಲಿ ಡ್ಯಾರಿಲ್ ಮಿಚೆಲ್ ಮತ್ತು ಮೈಕಲ್ ಬ್ರೇಸ್​ವೆಲ್ ಮಿಂಚಿದರು. ಇಬ್ಬರೂ ಸಹ ಆಕರ್ಷಕ ಅರ್ಧಶತಕಗಳನ್ನು ಬಾರಿಸಿ ಗಮನ ಸೆಳೆದರು. ಇದರೊಂದಿಗೆ ತಂಡದ ಮೊತ್ತವನ್ನು ಗಡಿ ದಾಟಿಸಿದರು. ಆರಂಭದಲ್ಲಿ ಮೇಲುಗೈ ಸಾಧಿಸಿದ ಸ್ಪಿನ್ನರ್​​ಗಳು ಮಧ್ಯಮ ಓವರ್​​ಗಳಲ್ಲಿ ಕೊಂಚ ರನ್ ಲೀಕ್ ಮಾಡಿದರು. ಮಿಚೆಲ್ 101 ಎಸೆತಗಳಲ್ಲಿ 3 ಬೌಂಡರಿ 63 ರನ್ ಗಳಿಸಿದ್ದಾರೆ. ಮೈಕಲ್ ಬ್ರೇಸ್​ವೆಲ್ 40 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ 53 ರನ್ ಗಳಿಸಿ ತಂಡದ ಗಡಿ 250ರ ಗಡಿ ದಾಟಿಸಿದರು. ಇವರ ಜೊತೆಗೆ ಗ್ಲೆನ್ ಫಿಲಿಪ್ಸ್ ಸಹ ಅಮೋಘ 34 ರನ್​​ಗಳ ಕಾಣಿಕೆ ನೀಡಿದರು.

ಹಾರ್ದಿಕ್ ಪಾಂಡ್ಯ ವಿಕೆಟ್ ಪತನದ ಬಳಿಕ ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಟೀಂ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ಟೀಂ ಇಂಡಿಯಾಗೆ ಸಿಗಲಿರುವ ಒಟ್ಟು ಬಹುಮಾನ ಮೊತ್ತ ಎಷ್ಟು ಗೊತ್ತಾ?

2025 ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡವು 2.24 ಮಿಲಿಯನ್ ಡಾಲರ್ (ಸುಮಾರು 20 ಕೋಟಿ ರೂ.) ಪಡೆಯಲಿದೆ. ರನ್ನರ್ ಅಪ್ ತಂಡಕ್ಕೂ ಹಣದ ಮಳೆ ಸುರಿಯಲಿದೆ. ರನ್ನರ್ ಅಪ್ ತಂಡಕ್ಕೆ 1.24 ಮಿಲಿಯನ್ ಡಾಲರ್ (9.74 ಕೋಟಿ ರೂ.) ಸಿಗಲಿದೆ.

ವರದಿ : ಜಿಲಾನ್ ಸಾಬ್ ಬಡಿಗೇರ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ