
ಯಲಬುರ್ಗಾ ತಾಲೂಕಿನ ಬಂಡಿ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ಶರಣಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ 14 ನೇ ವಾರ್ಷಿಕೋತ್ಸವ ಹಾಗೂ 5ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ ಸರಕಾರಿ ಬಾಲಕಿಯರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಪಾಧ್ಯಾಯಿನಿ ಶ್ರೀಮತಿ ಸುಮಂಗಲಾ ಅವರು ಮಾತನಾಡಿ, ಪಾಲಕರು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳಿಗೆ ಮೊಬೈಲ್ ಕೊಡಬೇಡಿ, ವಿದ್ಯಾರ್ಥಿಗಳಿಗೆ ನೀವು ಯಾವುದೇ ಶಾಲೆಯಲ್ಲಿ ಪ್ರವೇಶ ಪಡೆಯಿರಿ ಆದರೆ ಶಾಲೆ ತಪ್ಪಿಸಬೇಡಿ, ಇದರಿಂದ ಫಲಿತಾಂಶ ಕಡಿಮೆ ಆಗಿ ಹಾಳು ಮತ್ತು ಕೊಳೆ ಆಗುತ್ತದೆ ಅಮುಲ್ಯವಾದ ಸಮಯ ವ್ಯರ್ಥವಾಗಿ ಅಪಮೌಲ್ಯವಾಗುತ್ತದೆ, ಈ ಶಾಲೆಯನ್ನು ಬೆಳೆಸಲು ಆಡಳಿತ ಮಂಡಳಿಯವರು ಬಹಳ ಶ್ರದ್ದೆ ಮತ್ತು ಆಸಕ್ತಿಯಿಂದ ತಳಮಟ್ಟದಿಂದ ಬೆಳೆಸಲು ಕಾರಣಿಭೂತರಾಗಿದ್ದಾರೆ ಎಂದರು.

ಇನ್ನೋರ್ವ ಅತಿಥಿ ಡಾ. ಮೈಲಾರಪ್ಪ ಬಿಲ್ಕಾರ್ ಮಾತನಾಡುತ್ತಾ ನಾನು ಕೂಡಾ ಒಂದು ಖಾಸಗಿ ಶಾಲೆ ನಡೆಸುತ್ತಿದ್ದೇನೆ ಇಂದಿನ ಕಾಲದಲ್ಲಿ ಒಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ಕಷ್ಟ ಸಾಧ್ಯದ ಮಾತು ಅಂತಹದರಲ್ಲಿ ಕಡಿಮೆ ಶುಲ್ಕ ಪಡೆದುಕೊಂಡು ಶಾಲೆಯನ್ನು ಮುನ್ನಡೆಸುತ್ತಿರುವ ಆಡಳಿತ ಮಂಡಳಿಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೋರ್ವ ಅತಿಥಿ, ಶ್ರೀ ಕೆ. ಎಸ್. ಅರಕೇರಿ, ಚಿತ್ರಕಲಾ ಶಿಕ್ಷಕರು ಮಾತನಾಡಿ ಈ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಮತ್ತು ಇಂದಿನ ಆಡಳಿತ ಅಧಿಕಾರಿಯಾದ ಡಾ. ಮಹಾಂತೇಶ ನೆಲಾಗಣಿಯವರು ಕ್ರಿಯಾಶೀಲರು ನಾನು ಮತ್ತು ಅವರು ಯಲಬುರ್ಗಾದ ಗುಂಡಮ್ಮ ಶಿಕ್ಷಣ ಸಂಸ್ಥೆಯಲ್ಲಿ ಅನೇಕ ವರ್ಷ ಜೊತೆಗೆ ಕೆಲಸ ಮಾಡಿದ್ದೇವೆ ಅವರು ಸಂಸ್ಥೆಯ ಬಗ್ಗೆ ಅಪಾರ ಅಭಿಮಾನ ಹೊಂದಿದವರಾಗಿದ್ದಾರೆ ಎಂದರು. ಇದಕ್ಕಿಂತ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ಮಹಾಂತೇಶ ನೆಲಾಗಣಿ ನಾವು 2011 ರಲ್ಲಿಯೇ ಟ್ರಸ್ಟ್ ರಚನೆ ಮಾಡಿ 2012 ರಲ್ಲಿ ಪೂರ್ವ ಪ್ರಾಥಮಿಕ ಹಾಗೂ ಕಿರಿಯ ಪ್ರಾಥಮಿಕ ಶಾಲೆ ನಡೆಸಲು ಇಲಾಖೆಯಿಂದ ಅನುಮತಿ ಪಡೆದುಕೊಂಡು ಇಲ್ಲಿಯವರೆಗೆ ಮುನ್ನಡೆಸಿಕೊಂಡು ಬಂದಿದ್ದೇವೆ, ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಬೇರೆ ಬೇರೆ ವಸತಿ ಶಾಲೆಗೆ ಆಯ್ಕೆಯಾಗಿದ್ದಾರೆ, ಕೆಲವರು ಈಗ ಬಿ. ಎಸ್ಸಿ, ಬಿಕಾಂ, ಬಿಬಿಎ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಶಿಕ್ಷಣಕ್ಕೆ ಹಾಕಿದ ಬಂಡವಾಳ ನಿಧಾನವಾಗಿ ಫಲ ನೀಡುತ್ತೆ ಎಂದರು, ಭೂಮಿಗೆ ಬಿದ್ದ ಬೀಜ, ಎದೆಗೆ ತಾಗಿದ ಅಕ್ಷರ ಇಂದಲ್ಲ ನಾಳೆ ಫಲ ನೀಡೇ ನೀಡುತ್ತದೆ ಹಾಗಾಗಿ ಪಾಲಕರು ಮಕ್ಕಳನ್ನು ಶಾಲೆ ಬಿಡಿಸಬೇಡಿ, ದಾಖಲಾತಿ ಎಷ್ಟು ಅವಶ್ಯವೊ ಅಷ್ಟೇ ಹಾಜರಾತಿ ಕೂಡಾ ಅಗತ್ಯಎಂದು ತಿಳಿಸಿದರು, ಮುಂದುವರೆದು ನಮ್ಮ ವಲಯ ಮಟ್ಟದಲ್ಲಿ ನಮ್ಮದೊಂದೆ ಖಾಸಗಿ ಶಾಲೆ ಇರೋದು ಗುಣಮಟ್ಟದ ಶಿಕ್ಷಣ ನೀಡುವುದೇ ನಮ್ಮ ಧ್ಯೆಯ ಎಂದರು, ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ವಿ. ಕೆ. ಭದ್ರಗೌಡ್ರ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ಪ್ರಸ್ತುತ ನಿರ್ದೇಶಕರು ಮಾತನಾಡುತ್ತಾ ನಾವು ಒಂದು ಒಳ್ಳೆಯ ಸಂಕಲ್ಪ ಇಟ್ಟುಕೊಂಡು ಈ ಸಂಸ್ಥೆಯನ್ನು ತೆರೆದಿದ್ದೇವೆ ನಮ್ಮೂರಿನ ಹಾಗೂ ಸುತ್ತಮುತ್ತಲಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಬೇಸಿಗೆಯಲ್ಲಿ ನಮ್ಮ ಸಂಸ್ಥೆಯಲ್ಲಿ ಪಠ್ಯದ ಜೊತೆ ಯೋಗ, ಧ್ಯಾನ, ಚಿತ್ರಕಲೆ, ಸಂಸ್ಕೃತ ಮತ್ತು ಕ್ಲಾಸಿಕಲ್ ಡ್ಯಾನ್ಸ್ ಕಲಿಸಿಕೊಡಲಾಗುತ್ತದೆ, ವಿದ್ಯಾರ್ಥಿಗಳು ಸಮಯ ಹಾಳುಮಾಡದೇ,ತರಗತಿಯಲ್ಲಿ ಇರಬೇಕು ಇಲ್ಲವೇ ತರಬೇತಿಯಲ್ಲಿ ಇರಬೇಕು ಇದರಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯವಿದೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಗ್ರಾಮದ ಪ್ರವಚನಕಾರರದ ಶ್ರೀ, ವೇ. ಮೂ. ಪ್ರಕಾಶಯ್ಯ ಎಸ್. ಹಿರೇಮಠ್ ಮಾತನಾಡಿ ಈ ನಮ್ಮ ಗ್ರಾಮದ ಆರಾಧ್ಯದೈವ ಶ್ರೀ ಶರಣಬಸವೇಶ್ವರನ ಶಿರೋನಾಮೆಯಿಂದ ಆರಂಭಿಸಲ್ಪಟ್ಟ ಸಂಸ್ಥೆಯನ್ನು ಸಂಸ್ಥಾಪಕರು ಒಂದು ದೃಢವಾದ ಸಂಕಲ್ಪದೊಂದಿಗೆ ಪ್ರಾರಂಭಿಸಿದ್ದಾರೆ, ಯಾವುದೇ ಕಾರಣಕ್ಕೂ ಈ ಸಂಸ್ಥೆ ನಿಲ್ಲುವುದಿಲ್ಲ ಇನ್ನೂ ಉತ್ತರೋತ್ತರವಾಗಿ ಬೆಳೆಯುತ್ತದೆ ಎಂದರು ಮತ್ತು ಈ ಶಾಲೆಯಲ್ಲಿ ಕಲಿತ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರಿಗೂ ಒಳಿತಾಗುತ್ತದೆ, ಈಗ ಈ ಶಾಲೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಡಾ. ಮಹಾಂತೇಶ ನೆಲಾಗಣಿ ಮಧ್ಯಮ ಕುಟುಂಬದಿಂದ ಬೆಳೆದುಬಂದು ಖಾಸಗಿ ಶಾಲೆಯಲ್ಲಿ ಅವರು ಕೊಡುತ್ತಿರುವ ಕಡಿಮೆ ಪಗಾರ ತೆಗೆದುಕೊಂಡು, ಎಂ.ಎ, ಬಿ.ಇ ಡಿ,ಎಂ. ಫಿಲ್. ಪದವಿ ಪಡೆದುಕೊಂಡು ಸುಮಾರು ಒಂದೂವರೆ ದಶಕ ಸರಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ಅತಿಥಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಾ ಇತ್ತೀಚಿಗೆ ಕನ್ನಡ ವಿ. ವಿ. ಹಂಪಿಯಿಂದ ಕೈವಲ್ಯ ಸಾಹಿತ್ಯದಲ್ಲಿ ಪಿಎಚ್.ಡಿ ಪದವಿ ಪಡೆದುಕೊಂಡಿದ್ದು ನಮ್ಮ ಗ್ರಾಮಕ್ಕೆ ಹೆಮ್ಮೆಯ ಸಂಗತಿ ಎಂದು ನುಡಿದರು, ಮಹಾಂತೇಶ ಅವರು ಹೆಚ್ಚು ಸಮಯ ಶಿಕ್ಷಣಕ್ಕಾಗಿಯೇ ಕಳೆದಿದ್ದಾರೆ, ಅದರಿಂದ ಇಂದು ಅವರಿಗೆ ಗೌರವಯುತವಾಗಿ ಬದುಕಲು ಒಳ್ಳೆಯ ವೇತನ ಕೂಡಾ ಸರಕಾರ ಕೊಡುತ್ತಿದೆ, ಪ್ರತಿಯೊಬ್ಬರೂ ದುಡಿದ ಹಣದಲ್ಲಿ 10% ರಷ್ಟಾದರೂ ಸಮಾಜಕ್ಕೆ, ಮಕ್ಕಳ ಶಿಕ್ಷಣಕ್ಕೆ ಹಣ ವಿನಿಯೋಗ ಮಾಡಬೇಕು ಎಂದು ಶುಭ ಸಂದೇಶ ನೀಡಿದರು. ಇದೆ ವೇಳೆ ಶಾಲೆಯ ಸಿಬ್ಬಂದಿ ಹಾಗೂ ಅಂಗನವಾಡಿ ಟೀಚರ್ ಶ್ರೀಮತಿ ಸುಜಾತಾ ಹವಲ್ದಾರ್ ಅವರು ಮಹಾಂತೇಶ್ ಅವರನ್ನು ಸನ್ಮಾನಿಸಿದರು. ಸಂಸ್ಥೆಯ ವತಿಯಿಂದ ಗ್ರಾಮದ ಹಿರಿಯರಾದ,ಶ್ರೀ ದೇವೇಂದ್ರಪ್ಪ ಭದ್ರಗೌಡ್ರ, ಶ್ರೀ ಯೋಗಪ್ಪ ಕೊತಬಾಳ್, ಹಾಗೂ ಎರಡನೇ ಅಂಗನವಾಡಿ ಕಾರ್ಯಕರ್ತೆ, ಶ್ರೀಮತಿ ಸುಜಾತ ಎಸ್. ಹವಲ್ದಾರ್, ಶ್ರೀಮತಿ ಸುಮಂಗಲಾ, ಶ್ರೀ ಕೆ. ಎಸ್. ಅರಕೇರಿ, ಡಾ. ಮೈಲಾರಪ್ಪ ಬಿಲ್ಕಾರ್ ಮತ್ತು ಶ್ರೀ. ವಿ. ಕೆ. ಭದ್ರಗೌಡ್ರ ಅವರನ್ನು ಸಂಸ್ಥೆಯ ಆಡಳಿತ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಸನ್ಮಾನಿಸಿ ಪುಸ್ತಕ ವಿತರಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪಾಲಕರಾದ ಶ್ರೀ ಮುತ್ತಯ್ಯ ಆರ್. ಹಿರೇಮಠ್, ಶಿಕ್ಷಣ ಪ್ರೇಮಿ, ಶ್ರೀ ಕೊಟ್ರೇಶ್, ಗೂಳಪ್ಪ ಡಿ. ಅಪ್ಪಾಜಿ ಸೇರಿದಂತೆ ನೂರಾರು ವಿದ್ಯಾರ್ಥಿ ಪಾಲಕರು ಹಾಜರಿದ್ದು ಮಕ್ಕಳ ಕಾರ್ಯಕ್ರಮ ಯಶಸ್ಸಿಗೆ ಕಾರಣೀಕರ್ತರಾದರು. ಪ್ರಾರ್ಥನೆಯನ್ನು ಕು. ದೀಕ್ಷಾ ಹಾಗೂ ಸಂಗಡಿಗರು ನೆರವೇರಿಸಿದರು, ಸ್ವಾಗತವನ್ನು ಕು. ಈರಮ್ಮ ಕೆ. ಮೂಲಿಮನಿ, ವಾರ್ಷಿಕ ವರದಿಯನ್ನು ಶ್ರೀಮತಿ ನವ್ಯಾ ಎಂ. ನೆಲಾಗಣಿ, ಕಾರ್ಯಕ್ರಮದ ನಿರ್ವಹಣೆಯನ್ನು ಡಾ. ಮಹಾಂತೇಶ್ ಹಾಗೂ ಕು. ರತ್ನಾ ಬಿ. ಹೊಸಳ್ಳಿ ನೆರವೇರಿಸಿದರು.
- ಕರುನಾಡ ಕಂದ
